ಶ್ರೀ ಧರ್ಮಸ್ಥಳ ಭಜನಾ ಪರಿಷತ್ ವಿಶೇಷ ಸಭೆ

bhajane
ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕಿನ ವಿಶೇಷ ಸಭೆಯನ್ನು ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಭಜನಾ ಸಂಕೀರ್ತನಕಾರ ಜಯಾನಂದ ಕುಮಾರ್ ಹೊಸದುರ್ಗ, ನಗರಸಭಾ ಸದಸ್ಯೆ ಶ್ರೀಲತಾ, ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ವಿಜಯ ಶೆಟ್ಟಿ ಇದ್ದರು.
Published on

ವಿಜಯಾಣಿ ಸುದ್ದಿಜಾಲ ಕಾಸರಗೋಡು

ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕಿನ ವಿಶೇಷ ಸಭೆ ಕಾಸರಗೋಡಿನಲ್ಲಿ ಜರುಗಿತು. ಭಜನಾ ಪರಿಷತ್ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.22ರಿಂದ 29ರ ವರೆಗೆ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಹಾಗೂ ಭಜನಾ ಮಂಗಳೋತ್ಸವದ ಬಗ್ಗೆ ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಉಡುಪಿಯ ಸಮನ್ವಯಾಧಿಕಾರಿ ರಾಘವೇಂದ್ರ ಮಾಹಿತಿ ನೀಡಿದರು. ಭಜನಾ ಸಂಕೀರ್ತನಕಾರ ಜಯಾನಂದ ಕುಮಾರ್ ಹೊಸದುರ್ಗ ಕಾಸರಗೋಡಿನಲ್ಲಿ ಭಜನಾ ಪರಿಷತ್ತು ನಡೆದು ಬಂದ ರೀತಿ ಹಾಗೂ ಭಜನಾ ಮಂಡಳಿಗಳ ಸಹಕಾರದ ಬಗ್ಗೆ ವಿವರಿಸಿದರು. ನಗರಸಭಾ ಸದಸ್ಯೆ ಶ್ರೀಲತಾ, ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ವಿಜಯ ಶೆಟ್ಟಿ, ಭಜನಾ ಸಾಮ್ರಾಟ್ ಮೋಹನ್ ಆಚಾರ್ಯ ಪುಳ್ಕೂರು, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು ಉಪಸ್ಥಿತರಿದ್ದರು.

ಕಾಸರಗೋಡು ತಾಲೂಕು ಧರ್ಮಸ್ಥಳ ಭಜನಾ ಪರಿಷತ್ತಿನ ಶಾಶ್ವತ ಸಮಿತಿ ರಚನೆ, ವರ್ಷದಲ್ಲಿ ನಾಲ್ಕು ಸಮಿತಿ ಸಭೆಗಳ ಆಯೋಜನೆ, ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ಕನಿಷ್ಠ ಐದು ಮಂಡಳಿಗಳಿಂದ 10 ಶಿಬಿರಾರ್ಥಿಗಳನ್ನು ಕಳುಹಿಸಿಕೊಡುವುದು, ಕಮ್ಮಟದ ಭಜನಾ ಮಂಗಳೋತ್ಸವದ ದಿವಸ ಹತ್ತಕ್ಕಿಂತ ಹೆಚ್ಚು ಭಜನಾ ಮಂಡಳಿಗಳನ್ನು ಕಳುಹಿಸಿಕೊಡುವುದರ ಜತೆಗೆ ಕಾಸರಗೋಡು ಭಜನಾ ಪರಿಷತ್ತನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಸಮಾಲೋಚಿಸಲಾಯಿತು. ಭಜನಾ ಪರಿಷತ್ತಿನ ಕಾರ್ಯದರ್ಶಿಯಾಗಿ ಪದ್ಮನಾಭ ಆಚಾರ್ಯ ಅವರನ್ನು ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಯೋಜನಾಧಿಕಾರಿ ಮುಖೇಶ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net