ವಿಜಯಪುರದಲ್ಲಿ ಬ್ಲಾಕ್ ಫಂಗಸ್​ಗೆ ಮೊದಲ ಸಾವು! ಗ್ರಾಮ ಪಂಚಾಯತಿ ಸದಸ್ಯನನ್ನೇ ಬಲಿ ಪಡೆದ ಫಂಗಸ್

black
Published on

ವಿಜಯಪುರ: ಕರೊನಾ ಸೋಂಕಿನ ನಡುವೆ ಬ್ಲಾಕ್ ಫಂಗಸ್ ಕೂಡ ಆರಂಭವಾಗಿದ್ದು, ಗುಮ್ಮಟ ನಗರಿ ವಿಜಯಪುರದಲ್ಲಿ ಬುಧವಾರದಂದು ಬ್ಲಾಕ್ ಫಂಗಸ್​ಗೆ ಮೊದಲನೇ ಸಾವಾಗಿದೆ. ಗ್ರಾಮ ಪಂಚಾಯತಿ ಸದಸ್ಯನನ್ನೇ ಫಂಗಸ್​ ಬಲಿ ಪಡೆದಿದೆ.

ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದಲಿಂಗಪ್ಪ ಮಲ್ಲಣ್ಣವರ(48) ಸಾವನ್ನಪ್ಪಿರುವ ದುರ್ದೈವಿ. ಅವರು ಕೆಲ ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಜಿಲ್ಲೆಯಲ್ಲಿ ಮೊನ್ನೆ 25 ಬ್ಲಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆ ಮೂರು ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಪತ್ತೆಯಾಗಿರುವ 28 ಪ್ರಕರಣಗಳಲ್ಲಿ ಮೊದಲನೇ ಸಾವು ಸಂಭವಿಸಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net