ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಹೊತ್ತಿ ಉರಿದ ಕಿಯೊನಿಕ್ಸ್​; 50ಕ್ಕೂ ಹೆಚ್ಚು ಕಂಪ್ಯೂಟರ್​ಗಳು ಭಸ್ಮ

Fire
Published on

ರಾಯಚೂರು: ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಕಿಯೊನಿಕ್ಸ್​ವೊಂದು ಹೊತ್ತಿ ಉರಿದಿದ್ದು, 50ಕ್ಕೂ ಹೆಚ್ಚು ಕಂಪ್ಯೂಟರ್​ಗಳು ಸುಟ್ಟು ಭಸ್ಮವಾಗಿವೆ. ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿ ಎದುರಿನಲ್ಲಿ ಈ ಅವಘಡ ಸಂಭವಿಸಿದೆ.

ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ಗೆ ಒಳಗಾದ ಕಿಯೊನಿಕ್ಸ್​ ಸೆಂಟರ್ ಸಿದ್ದು ಅಂಗಡಿಗೆ ಸೇರಿದ್ದು, ಇಲ್ಲಿದ್ದ 50ಕ್ಕೂ ಅಧಿಕ ಕಂಪ್ಯೂಟರ್​ಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಸುಮಾರು 18ರಿಂದ 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೀಡಾಗಿ, ನಷ್ಟ ಸಂಭವಿಸಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಸದರ್ ಬಜಾರ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net