ಬೆಂಕಿ ಅವಘಡ, ಸೊತ್ತು ನಾಶ

china fire accident
Published on

ಸುಳ್ಯ: ನಗರದ ವೈದ್ಯ ಕುರುಂಜಿಭಾಗ್ ನಿವಾಸಿ ಡಾ.ಹಿಮಕರ್ ಕೆ.ಎಸ್.ಅವರ ಮನೆಯ ಕೊಟ್ಟಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ವೈದ್ಯರ ಕುಟುಂಬ ಮನೆಯಲ್ಲಿ ಇರಲಿಲ್ಲ. ಇನ್‌ವರ್ಟರ್ ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ, ಸ್ಥಳೀಯರಿಗೆ ಹೊಗೆ ಕಂಡು ಬಂದಿದ್ದರಿಂದ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದೆ. ಇನ್‌ವರ್ಟರ್ ಬ್ಯಾಟರಿ, ವಾಷಿಂಗ್ ಮಷಿನ್ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net