

ಬೆಂಗಳೂರು: ವರ್ಗಾವಣೆಗೊಂಡು 15 ತಿಂಗಳಾದರೂ ಸ್ಥಳ ನಿಯೋಜನೆಗೊಳ್ಳದ ಪರಿಣಾಮ ಕೆಲಸವಿಲ್ಲದೆ ಕೇಂದ್ರ ಕಚೇರಿಯಲ್ಲೇ ಕುಳಿತು ಪ್ರತಿ ತಿಂಗಳು ವೇತನ ಎಣಿಸುತ್ತಿದ್ದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 25 ಅಧಿಕಾರಿಗಳ ಪೈಕಿ 18 ಜನರ ವಿಶ್ರಾಂತಿಗೆ ತೆರೆ ಬಿದ್ದಿದೆ.ಈ ಎಲ್ಲ ಅಧಿಕಾರಿಗಳಿಗೂ ಹೊಸ ಹುದ್ದೆ ತೋರಿಸಿ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದೆ.
"25 ಅಧಿಕಾರಿಗಳಿಗೆ ಸುಮ್ಮೆ ಕೂರಿಸಿ ಸಂಬಳ' ಶೀರ್ಷಿಕೆಯಡಿ ಗುರುವಾರ "ವಿಜಯವಾಣಿ' ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಗೊಂಡ ಬಳಿಕ ಬೆನ್ನಲ್ಲೇ ಕ್ರಮ ಕೈಗೊಂಡ ಸಚಿವ ಭೈರತಿ ಸುರೇಶ್, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 7 ಜಂಟಿ ನಿರ್ದೇಶಕರು, 6 ಸಹಾಯಕ ನಿರ್ದೇಶಕರು, 5 ನಗರ ಯೋಜಕರಿಗೆ ಸ್ಥಳ ನಿಯೋಜನೆ ಮಾಡಿದ್ದಾರೆ.
ವರ್ಗಗೊಂಡವರು: ಜಂಟಿ ನಿರ್ದೇಶಕರಾದ ಎಂ.ಎಸ್. ಶಾಂತಲಾ, ಶೈಲೇಂದ್ರ ಸಿಂಗ್, ಎಚ್.ಎನ್. ರು, ಬಿ.ರಾಧಾ, ಎನ್.ಎಂ. ನಂಜೇಗೌಡ, ಆಶಾ ಭರತ್, ಸಂಗಪ್ಪ ಎಸ್. ಗಾರಂಪಳ್ಳಿ, ಸಹಾಯಕ ನಿರ್ದೇಶಕರಾದ ಶೃತಿ ಅರ್ಥಮ್, ಎಚ್.ಕೆ. ರೇಣುಕ್, ಮಂಜೇಶ್ಕುಮಾರ್, ಮಹಮ್ಮದ್ ಏಜಾಜ್ ಫರೀದ್, ಅಲ್ಲಾ ಬಕಾಶ್, ಎನ್.ವಿಶ್ವ, ನಗರ ಯೋಜಕರಾದ ಅಪೂರ್ವ ವಿಶ್ವನಾಥ್, ಪ್ರಶಾಂತ, ಜಿ.ಆರ್. ರು, ಬಿ.ಎಸ್. ಚಂದನ, ಸುಷ್ಮಾ.
ವಿಶ್ರಾಂತಿ ಜೀವನ: 2023ರ ಮಾರ್ಚ್, ಏಪ್ರಿಲ್ನಲ್ಲಿ ವರ್ಗಾವಣೆಯಾಗಿದ್ದ ಒಬ್ಬರು ನಗರ ಯೋಜಕರು, 6 ಸಹಾಯಕ ನಿರ್ದೇಶಕರು, 3 ಉಪ ನಿರ್ದೇಶಕರು, 14 ಜಂಟಿ ನಿರ್ದೇಶಕರು ಹಾಗೂ ಓರ್ವ ಅಪರ ನಿರ್ದೇಶಕರು ಸೇರಿ ಒಟ್ಟು 25 ಅಧಿಕಾರಿಗಳನ್ನು ಒಂದು ವರ್ಷದಿಂದ ಸ್ಥಳ ನಿರೀಣೆಯಲ್ಲಿ ಇರಿಸಲಾಗಿತ್ತು. ಒಬ್ಬೊಬ್ಬ ಅಧಿಕಾರಿ 8,9 ಮತ್ತು 10 ತಿಂಗಳಿಂದ ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದರು.
ಸ್ಥಳ ನಿಯುಕ್ತಿ ಆಗದ ವಿಚಾರವನ್ನು ನನ್ನ ಗಮನಕ್ಕೆ ತಂದಿರುವ "ವಿಜಯವಾಣಿ'ಗೆ ಕೃತಜ್ಱತೆ ಸಲ್ಲಿಸುತ್ತೇನೆ. ಅಧಿಕಾರಿಗಳಿಗೆ ಹುದ್ದೆ ತೋರಿಸಿ ವರ್ಗಾವಣೆ ಮಾಡಬೇಕೆಂದು ಸಂಬಂಧಪಟ್ಟವರಿಗೆ ಈಗಾಗಲೇ ಸೂಚಿಸಿದ್ದೇನೆ.
|ಭೈರತಿ ಸುರೇಶ್, ಸಚಿವ