ಗಣಪತಿ ಮೂರ್ತಿಗಳಿಗೆ ಅಂತಿಮ ರೂಪ

bmr (4)
Published on

ಬ್ರಹ್ಮಾವರ: ಗೌರಿ- ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಲ್ಲಿ, ಮನೆಗಳಲ್ಲಿ ಪೂಜೆಗೊಳ್ಳುವ ಗಣೇಶ ಮೂರ್ತಿಗಳ ತಯಾರಿಯಲ್ಲಿ ತೊಡಗಿರುವ ವಿಗ್ರಹ ರಚನೆಕಾರರು ಅಂತಿಮ ರೂಪ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಕಳೆದ 35 ವರ್ಷದಿಂದಲೂ ಗಣಪತಿ ವಿಗ್ರಹರಚನೆ ಮಾಡುತ್ತಿರುವ ಹಂದಾಡಿ ವೆಂಕಟೇಶ ನಾಯಕ ಮತ್ತು ತಂಡ 2 ತಿಂಗಳಿಂದ ಇಲ್ಲಿನ ಪರಿಸರದ ನಾನಾ ಭಾಗದ ಸಾರ್ವಜನಿಕ ಗಣೇಶೋತ್ಸವಕ್ಕೆ 80ಕ್ಕೂ ಹೆಚ್ಚು ಗಣಪತಿ ವಿಗ್ರಹಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಂದಾಪುರ ಭಾಗದಿಂದ ಆವೆಮಣ್ಣು ತಂದು ಹದಗೊಳಿಸಿ ಮರದ ಪೀಠದಲ್ಲಿ ಗಣಪತಿ ಮೂರ್ತಿ ರಚನೆಮಾಡಿ ನೈಸರ್ಗಿಕ ಬಣ್ಣ ಬಳಸಿ ಪರಿಸರಸ್ನೇಹಿ ವಿಗ್ರಹ ರಚಿಸುತ್ತಿದ್ದಾರೆ. ಮಹಾಚೌತಿಯಂದು ಬೆಳಗ್ಗೆ ಮೂರ್ತಿಗೆ ದೃಷ್ಟಿ ಇಟ್ಟು ವಿಲೇವಾರಿ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net