ದೇವರ ಅನುಗ್ರಹದಿಂದ ಒಳ್ಳೆಯ ಕಾರ್ಯದಲ್ಲಿ ಭಾಗಿ ಸಾಧ್ಯ

jnd
Published on

ಹಾಲಾಡಿ: ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಾವು ವಾಡಿದ್ದೇವೆ ಎನ್ನುವುದಕ್ಕಿಂತ ಅದರ ಒಂದು ಭಾಗವಾಗಿದ್ದೇವೆ ಎನ್ನುವುದು ಉತ್ತಮ. ಅಂತಹ ಅವಕಾಶಗಳು ದೊರೆತಾಗ ಪ್ರತಿಯೊಬ್ಬರು ತೊಡಗಿಸಿಕೊಳ್ಳುವ ಮೂಲಕ ಸೇವೆ ಸಲ್ಲಿಸಬೇಕು. ದೇವರ ಅನುಗ್ರಹವಿದ್ದಾಗ ವಾತ್ರ ನಾವು ಇಂತಹ ಒಳ್ಳೆಯ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯ ಎಂದು ಉದ್ಯಮಿ ವಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.

ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಗೆ ಕ್ಷೇತ್ರ ಅರ್ಚಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಬಾಯರಿ ವಾರ್ಗದರ್ಶನದಲ್ಲಿ ಭಾನುವಾರ ನಡೆದ ಶಿಲಾಮಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಬಾಯರಿ ಮಾತನಾಡಿ, ಸುಂದರ ದೇವಸ್ಥಾನದ ನಿರ್ವಾಣಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಉದ್ಯಮಿ ಎಸ್.ಪ್ರಕಾಶ ಶೆಟ್ಟಿ ಗೈನಾಡಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಹಿರಿಯರಾದ ಕುತ್ಯಾರು ನಾರಾಯಣ ಶೆಟ್ಟಿ, ಆಡಳಿತ ಸಮಿತಿ ಅಧ್ಯಕ್ಷ ದಿನಕರ್ ತೋಳಾರ್, ಗೌರವಾಧ್ಯಕ್ಷ ಬಂಟಕೋಡು ಗಣಪಯ್ಯ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ, ಹಾಲಾಡಿ ಶ್ರೀ ಮರಳುಚಿಕ್ಕು ದೇವಸ್ಥಾನ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ, ವಿಶಾಲಾಕ್ಷಿ. ಎನ್.ಶೆಟ್ಟಿ, ರಾಜೀವ ಶೆಟ್ಟಿ ಮತ್ತು ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಹಾಲಾಡಿ ಸಂತೋಷ್ ಶೆಟ್ಟಿ ಜೀರ್ಣೋದ್ಧಾರ ಸಮಿತಿಯ ವಿವರ ಮಂಡಿಸಿದರು. ಸೂರ್ಯಪ್ರಕಾಶ ದಾಮ್ಲೆ ಸ್ವಾಗತಿಸಿ, ನಿರೂಪಿಸಿದರು. ದಿನಕರ ತೋಳಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net