ಶಾಸಕರನ್ನೇ ವೇಶ್ಯೆ ಎಂದ ಮುಖಂಡರು; ಬೆಂಬಲಿಗರ ನಡುವೆ ಗಲಾಟೆ

Crime
Published on

ಚಾಮರಾಜನಗರ: ಶಾಸಕರೊಬ್ಬರನ್ನು ಪಕ್ಷದ ಮುಖಂಡರು ವೇಶ್ಯೆ ಎಂದಿದ್ದಕ್ಕೆ ಬೆಂಬಲಿಗರ ಮಧ್ಯೆ ಭಾರಿ ಹೊಡೆದಾಟ ನಡೆದಿದ್ದು, ಇಬ್ಬರಿಗೆ ಗಾಯವಾಗಿ ಒಬ್ಬ ಆಸ್ಪತ್ರೆಗೂ ದಾಖಲಾಗಿದ್ದಾನೆ. ಪ್ರಕರಣ ಇದೀಗ ಪೊಲೀಸ್​ ಠಾಣೆ ಮೆಟ್ಟಿಲನ್ನೂ ಏರಿದೆ.

ಚಾಮರಾಜನಗರದ ಕೊಳ್ಳೇಗಾಲದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ. ಬಹುಜನ ಸಮಾಜವಾದಿ ಪಕ್ಷ (ಬಿಎಸ್​ಪಿ)ದಿಂದ ಉಚ್ಚಾಟಿತಗೊಂಡಿರುವ ಶಾಸಕ ಎನ್​.ಮಹೇಶ್​ ಅವರನ್ನು ಬಿಎಸ್​ಪಿ ಮುಖಂಡರು ವೇಶ್ಯೆ ಎಂದು ಕರೆದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಎನ್.ಮಹೇಶ್ ಸಹಕಾರವೂ ಇತ್ತು ಎಂದು ನಿನ್ನೆ ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದ ಬಿಎಸ್​ಪಿ ಮುಖಂಡರು ಶಾಸಕ ಎನ್​.ಮಹೇಶ್​ ಅವರನ್ನು ವೇಶ್ಯೆ ಎಂದೆಲ್ಲ ಕರೆದು ಟೀಕಿಸಿದ್ದರು.

ಇದರಿಂದ ಸಿಟ್ಟಾದ ಮಹೇಶ್ ಬೆಂಬಲಿಗರು ಬಿಎಸ್​ಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಬಿಎಸ್​ಪಿ ಕಾರ್ಯಕರ್ತ ಹನಮಂತು ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾತ್ರವಲ್ಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ ಮಹೇಶ್ ಬೆಂಬಲಿಗರಾದ ನಗರಸಭಾ ಸದಸ್ಯ ನಾಸೀರ್ ಷರೀಫ್, ಜಕಾವುಲ್ಲಾ ವಿರುದ್ದ ಹಲ್ಲೆ ಜಾತಿನಿಂದನೆ ದೂರು ದಾಖಲು ಕೂಡ ದಾಖಲಾಗಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net