ಮಗನನ್ನು ಸಾವಿ‌ನಿಂದ ಪಾರು ಮಾಡಿದರೂ ಬದುಕುಳಿಯದ ತಂದೆ; ಚಿಕನ್​ ಅಂಗಡಿಯಾತ ಮೀನು ಹಿಡಿಯಲು ಹೋಗಿ ಸಾವಿಗೀಡಾದ!

death
ಸಾಂದರ್ಭಿಕ ಚಿತ್ರ
Published on

ಬಳ್ಳಾರಿ: ಸಾವಿನ ಸುಳಿಯಲ್ಲಿ ಸಿಲುಕಿದ್ದ ಮಗನನ್ನು ರಕ್ಷಿಸಿ ಇನ್ನೇನು ತಾನೂ ಬಚಾವಾಗಬೇಕು ಎಂಬಷ್ಟರಲ್ಲಿ ಅಪ್ಪ ಅದೇ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮನಹಳ್ಳಿಯ ಖಾದರ್ ಬಾಷಾ (34) ಮೃತಪಟ್ಟ ವ್ಯಕ್ತಿ.

ಚಿಕನ್ ಅಂಗಡಿ ಮಾಲೀಕನಾಗಿರುವ ಖಾದರ್, ಅಂಗಡಿಯಲ್ಲಿ ವ್ಯಾಪಾರ ಇಲ್ಲವೆಂದು ಮಗನ ಜೊತೆ ಕಾಲುವೆಯಲ್ಲಿ ಮೀನು ಹಿಡಿಯಲು ಹೋದಾಗ ಈ ದುರಂತ ಸಂಭವಿಸಿದೆ. ಸೋಮವಾರ ಸಂಜೆ ಮೀನು ಹಿಡಿಯಲು ಮುಂದಾಗಿದ್ದಾಗ, ಖಾದರ್ ಪುತ್ರ 13 ವರ್ಷದ ಮುಬಾರಕ್​ ರಭಸದಿಂದ ಹರಿಯುತ್ತಿದ್ದ ನೀರಿನ ಸುಳಿಗೆ ಸಿಲುಕಿ ಕೊಚ್ಚಿಹೋಗಿದ್ದಾನೆ.

ಕೂಡಲೇ ಧಾವಿಸಿ ಮಗನನ್ನು ಸಾವಿನ ದವಡೆಯಿಂದ ಪಾರು ಮಾಡಿ ಆತನನ್ನು ದಡಕ್ಕೆ ಸೇರಿಸುವಷ್ಟರಲ್ಲಿ ಮತ್ತೆ ರಭಸವಾಗಿ ಬಂದ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾನೆ. ಆತನ ಶವ ಮಂಗಳವಾರ ಬಳ್ಳಾರಿಯ ವಿನಾಯಕ ನಗರದ ಬಳಿ ಪತ್ತೆಯಾಗಿದೆ. ಕುಡತನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net