More

    ಕಾರಿನಲ್ಲಿದ್ದ ದೇವರ ಸ್ಟಿಕ್ಕರ್ ತೆಗೆಯುವಂತೆ ಸೂಚಿಸಿದ ಪೊಲೀಸರು; ಪೊಲೀಸರ ವಿರುದ್ಧ ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶ

    ಮಂಗಳೂರು: ಕಾರಿನ ಗಾಜಿನ ಮೇಲೆ ಅಂಟಿಸಿದ್ದ ದೇವರ ಸ್ಟಿಕ್ಕರ್ ತೆಗೆಯಲು ಸೂಚಿಸಿದ ಟ್ರಾಫಿಕ್ ಪೊಲೀಸ್ ವಿರುದ್ಧ ಹಿಂದು ಸಂಘಟನೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆ ಬಳಿ ಈ ಪ್ರಕರಣ ನಡೆದಿದೆ.

    ಸಾರ್ವಜನಿಕರೊಬ್ಬರ ಕಾರಿನ ಹಿಂಬದಿ ಗಾಜಿನ ಮೇಲೆ ಓಂ ಸಾಯಿ ಮತ್ತು ಕೊರಗಜ್ಜ ದೈವದ ಸ್ಟಿಕ್ಕರ್ ಅಂಟಿಸಲಾಗಿತ್ತು. ಈ ಕಾರನ್ನು ತಡೆದ ಪೊಲೀಸರು ಸ್ಟಿಕ್ಕರ್ ತೆಗೆಯುವಂತೆ ಆಗ್ರಹಿಸಿದ್ದಾರೆ. ಮಂಗಳೂರು ದಕ್ಷಿಣ ಠಾಣೆಯ ಎಎಸ್​ಐ ಅಲ್ಬರ್ಟ್​ ಲಸ್ರಾದೋ ಮತ್ತಿತತರ ಸಿಬ್ಬಂದಿ ದೇವರ ಸ್ಟಿಕ್ಕರ್ ತೆಗೆಯಲು ಒತ್ತಾಯಿಸಿದ ವಿಷಯ ಬಹಿರಂಗವಾಗುತ್ತಿದ್ದಂತೆ ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ.

    ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಹಿಂದು ಸಂಘಟನೆಯ ಕಾರ್ಯಕರ್ತರು, ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮವಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ನಂತರ ಉನ್ನತ ಪೊಲೀಸ್​ ಅಧಿಕಾರಿಗಳೂ ಸ್ಥಳಕ್ಕೆ ಧಾವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

    ಕಾರಿನಲ್ಲಿದ್ದ ದೇವರ ಸ್ಟಿಕ್ಕರ್ ತೆಗೆಯುವಂತೆ ಸೂಚಿಸಿದ ಪೊಲೀಸರು; ಪೊಲೀಸರ ವಿರುದ್ಧ ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶ
    ದೇವರ ಸ್ಟಿಕ್ಕರ್ ಇರುವ ಕಾರು

    ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ಮುಖ್ಯಮಂತ್ರಿ ಬೊಮ್ಮಾಯಿ ಕಚೇರಿಯಲ್ಲಿ ಕಿಚ್ಚ ಸುದೀಪ್​; ನಡೆಯಿತು ಹಲವು ವಿಷಯಗಳ ಕುರಿತು ಚರ್ಚೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts