More

    ಟಿ20 ವಿಶ್ವಕಪ್​ನ ಹೈವೋಲ್ಟೇಜ್​ ಪಂದ್ಯದ ಟಿಕೆಟ್​ ಬೆಲೆ ಕೇಳಿದ್ರೆ ದಂಗಾಗ್ತೀರಾ! ಐಸಿಸಿ ವಿರುದ್ಧ ಲಲಿತ್ ಮೋದಿ ಕಿಡಿ

    ನವದೆಹಲಿ: ಪ್ರಸಕ್ತ ವರ್ಷದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಈಗಾಗಲೇ ಸ್ಪರ್ಧೆಗೆ ಇಳಿದಿರುವ ಆಯಾ ದೇಶದ ತಂಡಗಳು ತಮ್ಮ ಗೆಲುವಿಗೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುವಲ್ಲಿ ನಿರತರಾಗಿವೆ. ಇನ್ನು ಈ ಬಾರಿಯ ಟಿ20 ವಿಶ್ವಕಪ್​ ಅತಿಥ್ಯವನ್ನು ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ವಹಿಸಲಿದ್ದು, ಇದೇ ಜೂನ್ 1ರಿಂದ 29ರವರೆಗೆ ನಡೆಸಲಿದೆ.

    ಇದನ್ನೂ ಓದಿ: ತಿರುಪತಿ ದರ್ಶನಕ್ಕೆ ಹೊರಟ ಕಾರು ಅಪಘಾತ; ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರು ದುರ್ಮರಣ!

    ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿರುವುದು ಕೇವಲ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಹೈ-ವೋಲ್ಟೇಜ್ ಕದನಕ್ಕೆ. ಈ ಪಂದ್ಯಕ್ಕಾಗಿ ತೀವ್ರ ಕಾತರದಿಂದ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಇದೀಗ ಭಾರೀ ಆಘಾತ ಎದುರಾಗಿದ್ದು, ಸ್ಟೇಡಿಯಂನ ಟಿಕೆಟ್ ದರದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬಂದಿದೆ. ಇದು ಸಿಕ್ಕಾಪಟ್ಟೆ ದುಬಾರಿ ಆಯಿತು ಎಂದು ನೆಟ್ಟಿಗರು ಸಹ ಆಕ್ರೋಶ ಹೊರಹಾಕಿದ್ದಾರೆ.

    ಇದನ್ನು ಗಮನಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಕಮಿಷನರ್ ಲಲಿತ್ ಮೋದಿ ಸಹ ಐಸಿಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಟಿ20​ ಪಂದ್ಯದ ಟಿಕೆಟ್ ದರ ಇಷ್ಟೊಂದು ದುಬಾರಿ ಏಕೆ? ಒಂದು ಟಿಕೆಟ್​ಗೆ 20,000 ಡಾಲರ್​? (16.6 ಲಕ್ಷ ರೂ.) ಇದು ಅತ್ಯಂತ ದುಬಾರಿ ಮೊತ್ತವಾಯಿತು. ಈಗ ಒಂದು ಟಿಕೆಟ್ ಖರೀದಿಸಲು ಕ್ರಿಕೆಟ್ ಫ್ಯಾನ್ಸ್ ಭಾರೀ ಹೆಣಗಾಡುವಂತ ಪರಿಸ್ಥಿತಿ ಎದುರಾಗಿದೆ” ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್)​.

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts