More

    ಅರೆಬರೆ ಕಾಮಗಾರಿಯಿಂದ ಅಪಾಯ – ರೈಲ್ವೆ ನಿಲ್ದಾಣ-ಹಾರಾಡಿ ರಸ್ತೆಯ ದುಸ್ಥಿತಿ – ಇಲಾಖೆಗಳ ಗೊಂದಲದಿಂದ ಉಳಿದು ಹೋದ ಸಮಸ್ಯೆ

    ಪುತ್ತೂರು: ಮಳೆಗಾಲದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಕಲ್ಪಿತ ಕಾರ್ಯಾಚರಣೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಆದರೆ ಅಧಿಕಾರಿಗಳಿಂದಲೇ ಆಗಿರುವ ತಪ್ಪಿನಿಂದ ನಿತ್ಯ ವಾಹನ ಸವಾರರು ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬರುತ್ತಿರುವ ಜಾಗಕ್ಕೆ ವರ್ಷವಾದರೂ ಮುಕ್ತಿ ನೀಡುವ ಕೆಲಸವಾಗಿಲ್ಲ. ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ದಾಖಲೆ ಸಿದ್ಧಪಡಿಸುವುದರಲ್ಲಿ ಮಗ್ನರಾಗಿದ್ದಾರೆ.

    ಪುತ್ತೂರು ಪೇಟೆಯಿಂದ ಉಪ್ಪಿನಂಗಡಿ ರಸ್ತೆಯನ್ನು ಸಮೀಪದಿಂದ ಸಂಪರ್ಕಿಸುವ ನೆಲ್ಲಿಕಟ್ಟೆ- ಕಬಕ-ಪುತ್ತೂರು ರೈಲ್ವೆ ನಿಲ್ದಾಣ-ಹಾರಾಡಿ ರಸ್ತೆಯ ಅಪೂರ್ಣ ಕಾಮಗಾರಿಗೆ ವರ್ಷವಾದರೂ ಮುಕ್ತಿ ಸಿಕ್ಕಿಲ್ಲ. ಸುಮಾರು 50 ವರ್ಷ ಹಳೆಯದಾದ ಸೇತುವೆಯನ್ನು ಹೊಸದಾಗಿ ನಿರ್ಮಾಣ ಮಾಡಬೇಕೆಂಬ ಆಗ್ರಹಕ್ಕೆ ನಗರಸಭೆ ಕಿವಿಗೊಡುತ್ತಿಲ್ಲ.

    2023ರ ಜುಲೈನಲ್ಲಿ ವಿಜಯವಾಣಿ ರಸ್ತೆಯ ಕಾಂಕ್ರೀಟ್ ಕಳಪೆಯಾಗಿದ್ದ ಬಗ್ಗೆ ವರದಿ ಮಾಡಿದ್ದು, ಈ ಸಂದರ್ಭ ಶಿಥಿಲಗೊಂಡ ಸೇತುವೆ ಬಗ್ಗೆ ಉಲ್ಲೇಖಿಸಿತ್ತು. ನಂತರ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾದರೂ, ಸೇತುವೆಯ ಜಾಗದ ಕೆಲಸ ಮಾಡದೆ ಹಾಗೇ ಬಿಡಲಾಗಿದೆ. ವಾಹನಗಳಿಗೆ ಮುಂದೆ ಅಪಾಯ ಇದೆ ಎಂದು ತಿಳಿಸುವ ಕಾರ್ಯವನ್ನೂ ಸಂಬAಧಪಟ್ಟ ಇಲಾಖೆಯ ಅಽಕಾರಿಗಳು ಇದುವರೆಗೆ ಮಾಡಿಲ್ಲ.

    ಕಾಂಕ್ರೀಟ್ ರಸ್ತೆಯಲ್ಲಿ ಸ್ವಲ್ಪ ಸೈಡ್‌ಕೊಡಲು ಹೋದರೂ ವಾಹನ ರಸ್ತೆಯಿಂದ ಗುಂಡಿಗೆ ಬೀಳುವ ಅಪಾಯವಿದೆ. ಘಟ್ಟ ಪ್ರದೇಶದ ತಪ್ಪಲಿನಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರುವ ಅಽಕಾರಿಗಳು ನಗರದ ಹೃದಯ ಭಾಗದಲ್ಲಿರುವ ಹಾರಾಡಿ- ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಕಲ್ಪಿತ ಕಾರ್ಯಾಚರಣೆಯನ್ನು ನಡೆಸಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ.

    ಅರೆಬರೆ ಕಾಮಗಾರಿಯಿಂದ ಅಪಾಯ - ರೈಲ್ವೆ ನಿಲ್ದಾಣ-ಹಾರಾಡಿ ರಸ್ತೆಯ ದುಸ್ಥಿತಿ - ಇಲಾಖೆಗಳ ಗೊಂದಲದಿಂದ ಉಳಿದು ಹೋದ ಸಮಸ್ಯೆ

    ಕಾಲುವೆಯಲ್ಲಿ ತುಂಬಿದ ಗಿಡಗಂಟಿ
    ಹಾರಾಡಿ ಸಮೀಪದಲ್ಲಿ ಮಾರುತಿ ಶೋರೂಂ ಮುಂಭಾಗದಲ್ಲಿರುವ ಕಾಲುವೆಯಲ್ಲಿ ರೆಂಬೆ, ಸೊಪ್ಪು ಸೇರಿ ತ್ಯಾಜ್ಯದ ರಾಶಿ ನಿರ್ಮಾಣವಾಗಿದ್ದು, ಧಾರಾಕಾರ ಮಳೆಯಾದರೆ, ಇದು ಅಣೆಕಟ್ಟಿನಂತಾಗಿ ರಸ್ತೆಯಲ್ಲೇ ನೀರು ಹರಿಯುವ ಸಾಧ್ಯತೆಯಿದೆ. ನಗರ ಪರ್ಯಟನೆಯ ಸಂದರ್ಭ ಹಿರಿಯ ಅಽಕಾರಿಗಳಿಗೆ ಈ ರಸ್ತೆಯನ್ನು ತೋರಿಸುವ ಕಾರ್ಯವಾಗಿಲ್ಲ.

    ಅರೆಬರೆ ಕಾಮಗಾರಿಯಿಂದ ಅಪಾಯ - ರೈಲ್ವೆ ನಿಲ್ದಾಣ-ಹಾರಾಡಿ ರಸ್ತೆಯ ದುಸ್ಥಿತಿ - ಇಲಾಖೆಗಳ ಗೊಂದಲದಿಂದ ಉಳಿದು ಹೋದ ಸಮಸ್ಯೆ

    ಕಳೆ ತೆಗೆಯುವವರೂ ಇಲ್ಲ
    ಹಾರಾಡಿ-ರೈಲ್ವೆ ನಿಲ್ದಾಣ ರಸ್ತೆಯ ಒಂದು ಬದಿಯಲ್ಲಿ ನೀರು ಹರಿಯುವ ತೋಡಿದ್ದರೆ, ಇನ್ನೊಂದು ಭಾಗದಲ್ಲಿ ಗದ್ದೆ, ಕಂದಕ, ಕೆರೆಯಿದೆ. ಆದರೆ ಹೊಸತಾಗಿ ಬರುವ ವಾಹನ ಸವಾರರಿಗೆ ಇದು ಅರಿವಿಗೆ ಬರದ ರೀತಿಯಲ್ಲಿ ಗಿಡಗಂಟಿಗಳು ಬೆಳೆದುನಿಂತಿವೆ. ಕಾಂಕ್ರೀಟ್ ಬದಿಯಲ್ಲಿ ಹುಲುಸಾಗಿ ಹುಲ್ಲು ಬೆಳೆದು ನಿಂತಿದೆ. ನಗರಸಭೆ ಇದನ್ನು ತೆಗೆದು ಹಾಕಿಲ್ಲ. ರಸ್ತೆಯ ಬದಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ.

    ಕೆಲಸ ಪೂರ್ಣಕ್ಕೆ ಬಲಿಬೇಕಾ?
    ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ವರ್ಷವಾಗುತ್ತಾ ಬಂದಿದ್ದು, ಆಗಿನಿಂದ ಸೇತುವೆಯಿರುವ ಜಾಗದಲ್ಲಿ ಕೆಲಸ ಅಪೂರ್ಣವಾಗಿ ಅಪಾಯ ಆಹ್ವಾನಿಸುತ್ತಿದೆ. ಆ ರಸ್ತೆಯ ಅನಗತ್ಯ ಸ್ಥಳವೊಂದರಲ್ಲಿ ರಸ್ತೆ ಉಬ್ಬು ಅಳವಡಿಸಲಾಗಿದೆಯಾದರೂ, ಅನಿವಾರ್ಯ ಪ್ರದೇಶದಲ್ಲಿ ಯಾವುದೇ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿಲ್ಲ. ಅರ್ಧಕ್ಕೆ ಬಿಟ್ಟಿರುವ ಕಾಮಗಾರಿ ಪೂರ್ಣಗೊಳ್ಳಲು ಪ್ರಾಣ ಬಲಿಯಾಗಬೇಕಾ ಎಂಬ ಪ್ರಶ್ನೆ ಸಾರ್ವಜನಿಕರಾದ್ದಾಗಿದೆ.

    ರೈಲ್ವೆ ಮಾಡಬೇಕು
    ರಸ್ತೆಯ ಕಾಂಕ್ರೀಟ್ ಕೆಲಸವನ್ನು ನಗರಸಭೆ ನಡೆಸಿದ್ದು, ಅದರಲ್ಲಿರುವ ಹಳೆಯ ಸೇತುವೆಯ ಕೆಲಸವನ್ನು ರೈಲ್ವೆ ಇಲಾಖೆ ನಡೆಸಬೇಕೆಂಬುದು ಅಧಿಕಾರಿಗಳ ವಾದವಾಗಿದೆ. ಸೇತುವೆ ವಿಚಾರವನ್ನು ರೈಲ್ವೆ ಇಲಾಖೆಗೆ ತಿಳಿಸಿದ್ದು, ನೆಹರು ನಗರದ ಸೇತುವೆ ಕಾಮಗಾರಿಯ ಬಳಿಕ ಇದನ್ನು ಕೈಗೆತ್ತಿಕೊಳ್ಳುವುದಾಗಿ ಆಗಿನ ಪೌರಾಯುಕ್ತರು ಸಾಮಾಜಿಕ ಹೋರಾಟಗಾರರಿಗೆ ಮಾಹಿತಿ ನೀಡಿದ್ದರು. ಆದರೆ ನೆಹರು ನಗರ ಕಾಮಗಾರಿ ಮುಗಿದು, ವಾಹನ ಸಂಚಾರ ಪ್ರಾರಂಭವಾದರೂ, ಈ ಸೇತುವೆಯ ಕಥೆ ಕೇಳುವವರಿಲ್ಲ.

    ರೈಲ್ವೆ ಸ್ಟೇಶನ್ ನಿಂದ ಹಾರಾಡಿಯವರೆಗೆ ನಿರ್ಮಿಸಿದ ಕಾಂಕ್ರೀಟು ರಸ್ತೆಯಲ್ಲಿ ನೇರ ಹೋದರೆ ಸೇತುವೆಯಿಂದ ಕೆಳಗೆ ಬೀಳಬೇಕಾಗಬಹುದು. ಈ ಬಗ್ಗೆ ಅಂದು ಪೌರಾಯುಕ್ತರಲ್ಲಿ ಕೇಳಿದಾಗ ರೈಲ್ವೆ ಇಲಾಖೆ ಮಾಡಲಿದೆ ಎಂದು ಹೇಳಿದ್ದರು. ಸ್ಥಳೀಯಾಡಳಿತಕ್ಕೂ ರೈಲ್ವೆ ಇಲಾಖೆಗೂ ಸಂಬAಧ ಏನೆಂದು ತಿಳಿಯುತ್ತಿಲ್ಲ. ಸ್ಥಳೀಯಾಡಳಿತದ ಜನಪ್ರತಿನಿಧಿಗಳು ನಿದ್ದೆ ಮಾಡಿದಂತಿದೆ. ಜವಾಬ್ದಾರಿ ಇರುವ ಅಽಕಾರಿಗಳು ಈ ಬಗ್ಗೆ ಯಾವುದೇ ಕಾರ್ಯ ಮಾಡದೆ ಮೌನವಾಗಿದ್ದಾರೆ.
    | ರಾಜೇಶ್ ಕೃಷ್ಣ ಪ್ರಸಾದ್
    ಸಾಮಾಜಿಕ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts