

ಬೆಳಗಾವಿ: ರಾಮದುರ್ಗ ಪಟ್ಟಣದ ನವಿನ ಪೇಟೆಯಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಆಟವಾಡಿಕೊಂಡಿರಬೇಕಿದ್ದ ಪುಟ್ಟ ಮಕ್ಕಳಿಬ್ಬರು ಮಂಚದ ಮೇಲೆ ಶವವಾಗಿದ್ದರು. ಅದರ ಪಕ್ಕದಲ್ಲೇ ಕೆಳಗೆ ಹಾಸಿಗೆ ಮೇಲೆ ಈ ಮಕ್ಕಳ ತಾಯಿ ಚಿರನಿದ್ರೆಗೆ ಜಾರಿದ್ದರೆ, ನೆಲದ ಮೇಲೆ ಮಲಗಿದ್ದ ತಂದೆಯೂ ಹೆಣವಾಗಿದ್ದ. ಪತಿ-ಪತ್ನಿ ತದ್ವಿರುದ್ಧ ದಿಕ್ಕಿನಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ಇಬ್ಬರ ತಲೆಗಳು ಜೀವಕ್ಕೆ ಜೀವ ಎಂಬಂತೆ ಇದ್ದವು... ಒಂದೇ ಕುಟುಂಬ ಈ ನಾಲ್ವರ ಶವಗಳನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್ಆ್ಯಪ್ ಸ್ಟೇಟಸ್
ಪ್ರವೀಣ ರಮೇಶ ಶೆಟ್ಟರ್(36), ಇವರ ಪತ್ನಿ ರಾಜೇಶ್ವರಿ (27), ಮಕ್ಕಳಾದ ಅಮೃತಾ (8), ಅದ್ವಿಕ್ (6) ಮೃತ ದುರ್ದೈವಿಗಳು.
ತಂದೆ-ತಾಯಿ-ಮಕ್ಕಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.