9 ವರ್ಷದ ಮಗನ ಕಣ್ಮುಂದೆಯೇ ಭೀಕರವಾಗಿ ಸಾವಿಗೀಡಾದ ತಂದೆ; ಅದೃಷ್ಟವಶಾತ್ ಬದುಕುಳಿದ ಪುತ್ರ

Accident
Published on

ವಿಜಯನಗರ: ಲಾರಿ ಹಾಗೂ ಬೈಕ್​ ನಡುವೆ ನಡೆದ ಅಪಘಾತದಲ್ಲಿ ಬೈಕ್​ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೊಬ್ಬ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಐಗಳ ಬಸಾಪುರ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.

ಹರಪನಹಳ್ಳಿ ತಾಲೂಕಿನ ಅರಸಿಕೇರೆ ಗ್ರಾಮದ ಚಂದ್ರೇಗೌಡ (40) ಸಾವಿಗೀಡಾದ ಬೈಕ್​ ಸವಾರ. ಈತನ ಪುತ್ರ 9 ವರ್ಷದ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಂದ್ರೇಗೌಡ ತಮ್ಮ ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಮನೆಗೆ ಮರಳುವಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಚಂದ್ರೇಗೌಡ ಮೈಮೇಲೆ ವಾಹನ ಹರಿದಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕಣ್ಮುಂದೆಯೇ ಅಪ್ಪನ ಸಾವನ್ನು ಕಂಡು ಮಗ ಆಘಾತಕ್ಕೆ ಒಳಗಾಗಿದ್ದಾನೆ. ಅರಸಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net