ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

Chinnappa
Published on

ಕೊಡಗು: ದಿನವಿಡೀ ಮದುವೆಯ ಸಂಭ್ರಮದಲ್ಲಿದ್ದ ಈ ಮನೆಯವರು ಇನ್ನೇನು ಎಲ್ಲವೂ ಸಾಂಗವಾಗಿ ನೆರವೇರಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಆಗಬಾರದ್ದೊಂದು ಆಗಿಹೋಗಿದೆ. ಪರಿಣಾಮವಾಗಿ ಸಂಭ್ರಮದಿಂದ ಕೂಡಿದ್ದ ಕುಟಂಬಸ್ಥರಲ್ಲಿ ದುಃಖತಪ್ತರಾಗುವಂತಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ‌ ಈ ದುರಂತ ಸಂಭವಿಸಿದ್ದು, ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣ ವಧುವಿನ ತಂದೆಯೇ ಮೃತಪಟ್ಟಿದ್ದು.

ಕಿಬ್ಬೆಟ್ಟ ಗ್ರಾಮದ ಚಿನ್ನಪ್ಪ (60) ಎಂಬವರು ಇಂದು ತಮ್ಮ ಪುತ್ರಿಯ ಮದುವೆಯನ್ನು ಹಮ್ಮಿಕೊಂಡಿದ್ದರು. ಮದುವೆಯ ಬಳಿಕ ಸಂಜೆಯ ಸುಮಾರಿಗೆ ನವವಿವಾಹಿತರನ್ನು ಕಾರಿಗೆ ಹತ್ತಿಸಿ ಗೋಕಾಕ್​ಗೆ ಕಳುಹಿಸಿಕೊಟ್ಟ ಅವರು ಇತ್ತ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಸಂಭ್ರಮದ ವಾತಾವರಣ ಕೆಲವೇ ಕ್ಷಣಗಳಲ್ಲಿ ಶೋಕಸಾಗರದಲ್ಲಿ ಮುಳುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net