ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಕೊಂದ ತಂದೆ; ತಲೆಗೆ ಸರಳಿನಿಂದ ಹೊಡೆದು ಕೊಲೆ..

crime
Published on

ಬೆಂಗಳೂರು: ಹಣ ಕೊಡು ಎಂದು ಸದಾ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿ ಈ ಕೊಲೆ ನಡೆದಿದೆ.

ಆರ್​.ಟಿ.ನಗರದ ಚಾಮುಂಡಿನಗರದ ನಿವಾಸಿ ಸುಲೇಮಾನ್ (18) ಕೊಲೆಗೀಡಾದ ಯುವಕ. ಈತನ ತಂದೆ ಮಹಮ್ಮದ್ ಶಂಶೀರ್ ಕೊಲೆ ಆರೋಪಿ. ವಿದ್ಯಾಭ್ಯಾಸ ಅರ್ಧಕ್ಕೇ ನಿಲ್ಲಿಸಿದ್ದ ಸುಲೇಮಾನ್ ಎಲ್ಲಿಯೂ​ ಕೆಲಸಕ್ಕೂ ಹೋಗದೆ ಸುಮ್ಮನೆ ಅಲೆದಾಡುತ್ತಿದ್ದ.

ಅಷ್ಟೇ ಅಲ್ಲದೆ, ಹಣ ಕೊಡು ಎಂದು ತಂದೆಯನ್ನು ಯಾವಾಗಲೂ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿತ್ತು. ಈ ವೇಳೆ ತಂದೆ ಮಗನ ತಲೆಗೆ ಸರಳಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವಕ್ಕೀಡಾದ ಮಗ ಮೃತಪಟ್ಟಿದ್ದಾನೆ. ಆರ್​.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಮ್ಮದ್ ಶಂಶೀರ್​​ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net