ಬೈಕ್ ಸಮೇತ ಕೆರೆಗೆ ಬಿದ್ದು ಸವಾರ ಸಾವು, ತಿರುವಲ್ಲಿ ಸಂಭವಿಸಿದ ಅಪಘಾತ..

Bike 2
ಅಪಘಾತದ ದೃಶ್ಯ ನೋಡಲು ಸೇರಿದ ಜನಜಂಗುಳಿ
Published on

ಹಾವೇರಿ: ತಿರುವೊಂದರಲ್ಲಿ ಸಂಭವಿಸಿದ ಅಪಘಾತದಿಂದಾಗಿ ಸವಾರನೊಬ್ಬ ಬೈಕ್​ ಸಮೇತ ಕೆರೆಗೆ ಬಿದ್ದು ಸಾವಿಗೀಡಾಗಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ.

ಬಾಷಾಸಾಬ್​ ಜಿಗಳೂರ (49) ಅಪಘಾತದಲ್ಲಿ ಸಾವಿಗೀಡಾದ ಬೈಕ್ ಸವಾರ. ಬಾಷಾಸಾಬ್​ ಸವಣೂರು ಪಟ್ಟಣದ ಕಡೆಯಿಂದ ಹಾವೇರಿಯತ್ತ ಸಾಗುತ್ತಿದ್ದಾಗ ಸವಣೂರು ತಾಲೂಕಿನ ಕಲ್ಮಡವು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಕಲ್ಮಡವು ಗ್ರಾಮದ ಬಳಿ ತಿರುವು ಇದ್ದಿದ್ದರಿಂದ ತಕ್ಷಣಕ್ಕೆ ಬೈಕ್​ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗದೆ ಅದು ಸೀದಾ ರಸ್ತೆ ಪಕ್ಕದ ಕೆರೆಗೆ ಹೋಗಿ ಬಿದ್ದಿದೆ. ಸ್ಥಳೀಯರು ಶವವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.

ತಿರುವಿನಲ್ಲಿ ಸೂಕ್ತ ಸೂಚನಾ ಫಲಕಗಳು ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net