ತಂದೆಯ ಚೀರಾಟ ಕೇಳಿ ಪುತ್ರ ಬಳಿಗೆ ಹೋದ; ಕೆಲವೇ ಕ್ಷಣಗಳಲ್ಲಿ ಸಾವಿಗೀಡಾದ್ರು ಅಪ್ಪ-ಮಗ..

Father Son
Published on

ಬೆಂಗಳೂರು: ಕೆಲಸ ಮಾಡುತ್ತಿದ್ದ ಅಪ್ಪ ಇದ್ದಕ್ಕಿದ್ದಂತೆ ಜೋರಾಗಿ ಚೀರಿಕೊಂಡಿದ್ದಾರೆ. ಏನಾಯಿತು ಎಂದು ನೋಡಲು ಹತ್ತು ವರ್ಷದ ಮಗ, ತಂದೆಯ ಬಳಿಗೆ ಹೋಗಿದ್ದಾನೆ. ಅಷ್ಟೇ, ಕೆಲವೇ ಕ್ಷಣಗಳಲ್ಲಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇಂಥದ್ದೊಂದು ಪ್ರಕರಣ ಇಂದು ಬೆಂಗಳೂರಿನ ಆರ್​.ಟಿ.ನಗರದ ಸುಲ್ತಾನ್​ಪಾಳ್ಯ ಬಳಿ ನಡೆದಿದೆ. ರಾಜು (36) ಮತ್ತು ಸಾಯಿ (10) ಸಾವಿಗೀಡಾದ ತಂದೆ-ಮಗ. ಇಲ್ಲಿನ ರಾಮಕೃಷ್ಣ ಅಪಾರ್ಟ್​ಮೆಂಟ್​ನಲ್ಲಿ ಈ ದುರಂತ ಸಂಭವಿಸಿದೆ.

ಅಪಾರ್ಟ್​ಮೆಂಟ್​ನ ಸಂಪ್ ಸ್ವಚ್ಛಗೊಳಿಸಲು ರಾಜು ತೆರಳಿದ್ದಾಗ, ಜೊತೆಗೆ ಪುತ್ರ ಸಾಯಿ ಕೂಡ ಹೋಗಿದ್ದಾಗ. ಆಗ ರಾಜುಗೆ ಕರೆಂಟ್ ಶಾಕ್ ತಗುಲಿದೆ. ಹೀಗಾಗಿ ಆತ ಜೋರಾಗಿ ಚೀರಿಕೊಂಡಾಗ ಪುತ್ರ ಸಾಯಿ ಬಳಿಗೆ ಹೋಗಿ ನೋಡಿದ್ದ. ಆಗ ಪುತ್ರನಿಗೂ ಶಾಕ್ ತಗುಲಿದ್ದು, ಇಬ್ಬರೂ ಸಾವಿಗೀಡಾಗಿದ್ದಾರೆ.

ಬೆಳಗ್ಗೆ 8 ಗಂಟೆಗೆ ಈ ಘಟನೆ ನಡೆದಿದ್ದು, ತಂದೆ-ಮಗನ ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net