

ಕಾಸರಗೋಡು: ಫ್ಯಾಷನ್ ಡಿಸೈನರ್ ಯುವಕ ಹೃದಯಾಘಾತಕ್ಕೆ ಬಲಿಯಾದ ಘಟನೆ ನೆಲ್ಲಿಕಟ್ಟೆ ಪೈಕದಲ್ಲಿ ನಡೆದಿದೆ.
ಪಿ.ಎಂ.ನಾಸರ್-ರಮ್ಲಾ ದಂಪತಿ ಪುತ್ರ ಹುದೈಫ್(20) ಸಾವಿಗೀಡಾದವರು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು, ಬೆಳಗ್ಗೆ ಎದ್ದೇಳದಿದ್ದಾಗ ಮನೆಯವರು ತೆರಳಿ ನೋಡಿದ್ದು ಮೃತದೇಹ ಪತ್ತೆಯಾಗಿದೆ. ಎರ್ನಾಕುಳಂನ ಖಾಸಗಿ ಸಂಸ್ಥೆಯೊಂದರಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.