3 ಲಕ್ಷ ರೂ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ

death
ಸಾಂದರ್ಭಿಕ ಚಿತ್ರ
Published on

ಹಾವೇರಿ: ಸರ್ಕಾರ ಏನೇ ಅಭಿವೃದ್ಧಿ, ಯೋಜನೆ, ಸಹಾಯ, ಸಹಕಾರ ಎಂದರೂ ರೈತರ ಆತ್ಮಹತ್ಯೆಯಂತೂ ನಿಲ್ಲುತ್ತಿಲ್ಲ. ಒಂದಲ್ಲ ಒಂದು ಕಡೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದೆರಗುತ್ತಿರುತ್ತದೆ. ಇದೀಗ ಆ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆ ಆಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಬನೂರು ಗ್ರಾಮದಲ್ಲಿ ಶಿವಮೂರ್ತಯ್ಯ ಹಂಪಯ್ಯ ಗೊಟಗೋಡಿಮಠ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ಎಕರೆ 26 ಗುಂಟೆ ಜಮೀನು ಹೊಂದಿದ್ದ ಇವರು 3 ಲಕ್ಷ ರೂಪಾಯಿ ಸಾಲ ಕೂಡ ಮಾಡಿಕೊಂಡಿದ್ದರು. ಆದರೆ ಸರಿಯಾದ ಬೆಳೆ ತೆಗೆಯಲಾಗದೆ, ಸಾಲ ತೀರಿಸಲಾಗದೆ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net