ಸೇಡಿಗೆ ಬಲಿಯಾದನೇ ಹರ್ಷ?; ಆರು ವರ್ಷಗಳಿಂದಿತ್ತು ಹಗೆತನ..

Harsha
Published on

ಮಂಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ಕಳೆದ ಆರು ವರ್ಷಗಳಿಂದ ಇದ್ದ ಹಗೆತನವೇ ಕಾರಣವಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಪೂರಕವೆಂಬಂತೆ ಒಂದಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹರ್ಷ 2015ರಲ್ಲಿ ಪ್ರವಾದಿ ಮಹಮ್ಮದ್ ಹಾಗೂ ಅಲ್ಲಾ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್​ ಹಾಕಿದ್ದ ಎಂದು ಮಂಗಳೂರು ಮುಸ್ಲಿಮ್ಸ್​ ಎಂಬ ಫೇಸ್​ಬುಕ್ ಪೇಜ್​ನಲ್ಲಿ ಬರೆಯಲಾಗಿದೆ.

ಅಲ್ಲದೆ 'ಪ್ರವಾದಿ ನಿಂದನೆ ಮಾಡಿದ ಯಾರೇ ಆದರೂ ಅವರ ಆಯುಷ್ಯ ಎಷ್ಟೇ ಪ್ರಭಾವಿಯಾದರೂ ವೃದ್ಧಿ ಆಗದು..' ಎಂದು ಅದೇ ಪೇಜ್​ನಲ್ಲಿ ಬರೆಯಲಾಗಿದ್ದು, ಹರ್ಷ ಅದೇ ಸೇಡಿಗೆ ಕೊಲೆಯಾಗಿರಬಹುದಾ ಎಂಬ ಅನುಮಾನವನ್ನು ಮೂಡಿಸಿದೆ.

ಪ್ರವಾದಿ ನಿಂದನೆ ಮಾಡಿದವರನ್ನು ಎಂದಿಗೂ ಬಿಡಲ್ಲ ಎಂದು ಮಂಗಳೂರು ಮುಸ್ಲಿಮ್ಸ್ ಫೇಸ್‌ಬುಕ್‌ ಪೇಜ್​​ನಲ್ಲಿ ಎಚ್ಚರಿಕೆ ನೀಡಿದ ಕುರಿತು ಇದೀಗ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net