ನಿಸ್ವಾರ್ಥ ಸೇವೆ ಜೀವನ ಧೋರಣೆ

bhuvanedra college
ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಅರುಣ ಕುಮಾರ್ ಎಸ್.ಆರ್. ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜು ವಾರ್ಷಿಕಾಂಕ ‘ಚಂದನ 61’ರ ಬಿಡುಗಡೆಗೊಳಿಸಲಾಯಿತು. ಪ್ರಾಚಾರ್ಯ ಡಾ.ಮಂಜುನಾಥ್ ಎ.ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ, ಡಾ.ಅರುಣಕುಮಾರ ಎಸ್.ಆರ್., ಹಿಂದಿ ವಿಭಾಗ ಮುಖ್ಯರಾದ ಪ್ರೊ.ನಾಗಭೂಷಣ್ ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಇಂದಿನ ಸಮಾಜದಲ್ಲಿ ಆಕ್ಷೇಪ, ತಪ್ಪುಗಳಿಲ್ಲದೆ ಬದುಕು ಕಟ್ಟುವುದು ಬಹುದೊಡ್ಡ ಅಂಶ. ನಿಸ್ವಾರ್ಥ ಸೇವೆ ಇಂದು ಕೇವಲ ಹೇಳಿಕೆಗೆ ಸೀಮಿತವಾಗುತ್ತಿದೆ. ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಪರಮಸಾಹಸವೇ ಸರಿ. ಸೇವೆಯನ್ನೇ ಜೀವನಧೋರಣೆ ಎಂಬುದಾಗಿ ಅನುಸರಿಸುವವರು ಬೆರಳೆಣಿಕೆಯಷ್ಟೇ ಮಂದಿ. ಅಂತವರಲ್ಲಿ ಡಾ.ಅರುಣಕುಮಾರ್ ಎಸ್.ಆರ್. ಒಬ್ಬರು ಎಂದು ಪ್ರಾಚಾರ್ಯ ಡಾ.ಮಂಜುನಾಥ್ ಎ.ಕೋಟ್ಯಾನ್ ಹೇಳಿದರು.

ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಕಾಲೇಜು ವಾರ್ಷಿಕಾಂಕ ‘ಚಂದನ 61’ರ ಬಿಡುಗಡೆ ಜತೆಗೆ ವೃತ್ತಿಯಿಂದ ನಿವೃತ್ತರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅರುಣ ಕುಮಾರ್ ಎಸ್.ಆರ್. ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ ಪ್ರಸ್ತಾವಿಸಿದರು. ಡಾ.ಅರುಣಕುಮಾರ ಎಸ್.ಆರ್., ವಿದ್ಯಾರ್ಥಿಗಳಾದ ಶ್ರೀರಕ್ಷಾ ಭಟ್, ವಿಯೋಲಾ, ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ, ಕನ್ನಡ ವಿಭಾಗದ ಉಪನ್ಯಾಸಕಿ ವನಿತಾ ಶೆಟ್ಟಿ ಅಭಿನಂದನಾ ಮಾತನಾಡಿದರು. ಹಿಂದಿ ವಿಭಾಗ ಮುಖ್ಯರಾದ ಪ್ರೊ.ನಾಗಭೂಷಣ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ವೇತಾ ಸ್ವಾಗತಿಸಿ, ಸೌರಭ್ ಶೆಣೈ ವಂದಿಸಿದರು. ಗಣೇಶ್ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net