ಸಂಗೀತಾ ಕಂಪನಿಯಿಂದ ಎಕ್ಸ್​ಪ್ರೆಸ್​ ಡೆಲಿವರಿ ಸೇವೆ: 30 ನಿಮಿಷದಲ್ಲಿ ರವಾನೆ

sangeetha
Published on

ಬೆಂಗಳೂರು: ಸ್ಮಾರ್ಟ್​ ಗ್ಯಾಜೆಟ್​ಗಳ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಡಿ ಇಟ್ಟಿರುವ ಸಂಗೀತಾ ಕಂಪನಿ, 30 ನಿಮಿಷಗಳ ಎಕ್ಸ್​ಪ್ರೆಸ್​ ಡೆಲಿವರಿ ಸೇವೆಯನ್ನು ಘೋಷಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿಷಯ ಹಂಚಿಕೊಂಡ ಸಂಗೀತಾ ಸಮೂಹದ ಎಂಡಿ ಸುಭಾಷ್​ ಚಂದ್ರ, ದಕ್ಷಿಣ ಭಾರತದ (ಕೇರಳ ಹೊರತುಪಡಿಸಿ) ರಾಜ್ಯಗಳಲ್ಲಿ ಈ ಸೇವೆ ಆರಂಭಿಸಲಾಗಿದೆ. ಆನ್​ಲೈನ್​ನಲ್ಲಿ ಸ್ಮಾರ್ಟ್​ಪೋನ್​ ಸೇರಿ ಇತರೆ ಗೃಹೋಪಯೋಗಿ ವಸ್ತುಗಳನ್ನು ಬುಕಿಂಗ್​ ಮಾಡಿದರೆ 30 ನಿಮಿಷದಲ್ಲಿ 5 ಕಿ.ಮೀ., ಒಂದು ಗಂಟೆಯಲ್ಲಿ 10 ಕಿ.ಮೀ ಹಾಗೂ 2 ಗಂಟೆಯಲ್ಲಿ 30 ಕಿ.ಮೀ. ಅಂತರದ ಮನೆ ಬಾಗಿಲಿಗೆ ತಲುಪಿಸಲಾಗುವುದು. ದಕ್ಷಿಣ ಭಾರತದಲ್ಲಿ ಆರಂಭಿಸಿರುವ ಈ ಸೇವೆಯನ್ನು ತಿಂಗಳಾಂತ್ಯದಲ್ಲಿ ಮುಂಬೈ, ದೆಹಲಿ ಮತ್ತು ಫರಿದಾಬಾದ್​ ಸೇರಿ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ವಿಸ್ತರಿಸುವುದಾಗಿ ಹೇಳಿದರು.

ಹಿಂದೆ 47 ನಿಮಿಷದಲ್ಲಿ ಡೆಲಿವರಿ ಮಾಡಲಾಗುತ್ತಿತ್ತು. ಇದೀಗ 30 ನಿಮಿಷಗಳಲ್ಲೇ ಸ್ಮಾರ್ಟ್​ ಗ್ಯಾಜೆಟ್​ಗಳನ್ನು ತಲುಪಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿದ್ದೇವೆ.ಗ್ರಾಹಕರ ಮೌಲ್ಯಗಳು, ವೇಗ, ವಿಶ್ವಾಸಾರ್ಹತೆಯೊಂದಿಗೆ ನೇರ ಖರೀದಿ ಮತ್ತು ವಾಣಿಜ್ಯ ನಡುವಿನ ಅಂತರವನ್ನು ಬೆಸೆಯುವ ಮೂಲಕ ವ್ಯಾಪಾರ ಅನುಭವ ನೀಡಲಾಗುತ್ತಿದೆ. ಇದಕ್ಕಾಗಿ 400 ಕೋಟಿ ರೂ. ಬಂಡವಾಳ ಹೂಡಲಾಗಿದೆ ಎಂದರು.

ದಕ್ಷಿಣ ಭಾರತದ 410 ನಗರಗಳಲ್ಲಿ ಸೇರಿ ದೇಶಾದ್ಯಂತ 800 ಸಂಗೀತಾ ಮಳಿಗೆಗಳಿವೆ. ಡೆಬಿಟ್​, ಕ್ರೆಡಿಟ್​, ಬಜಾಜ್​ ಫೈನಾನ್ಸ್​ ಅಡಿ ಇಎಂಐ ಮೂಲಕ ಗ್ರಾಹಕರಿಗೆ ಮೊಬೈಲ್​ ಮಾರಾಟ ಮಾಡಲಾಗುತ್ತಿದೆ. ಮೊಬೈಲ್​ಗೂ ವಿಮೆ ಸೌಲಭ್ಯ ಇದೆ. ಹಳೆಯ ಮೊಬೈಲ್​ ವಿನಿಮಯ ಸಹ ಮಾಡಿಕೊಳ್ಳಬಹುದು. ಆನ್​ಲೈನ್​ನಲ್ಲಿ ಬುಕಿಂಗ್​ ಮಾಡಿದವರಿಗೆ ವಿಶೇಷವಾಗಿ ನಮ್ಮ ಕಂಪನಿಯ ಟೆಕ್ಕಿಗಳು ಮನೆ ಬಾಗಿಲಿಗೆಗೆ ಡೆಲಿವರಿ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಲಾಜಿಸ್ಟಿಕ್ಸ್​ನೊಂದಿಗೆ ವಾಣಿಜ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ನಿರ್ದೇಶಕ ಚಂದುರೆಡ್ಡಿ ಹೇಳಿದ್ದರು.

ಸಂಗೀತಾ ಕಂಪನಿ ಡಿಜಿಟಲ್​ ಮಾರ್ಕೆಟಿಂಗ್​ ಮುಖ್ಯಸ್ಥ ಅರ್ನಿಬನ್​ ಚಕ್ರವರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net