ಸಂಸಾರ ಬಂಧನದಲ್ಲಿ ಸಿಲುಕಿದರೂ ಸಾಧನೆಯಿಂದ ಯಶಸ್ಸು

Bdk_samsara
Published on

ಮಧೂರು: ಸಂಸಾರ ಬಂಧನದಲ್ಲಿ ಸಿಲುಕಿಯೂ ಸಿಲುಕದಂತೆ ಮನಸ್ಸಿನ ಸಾಧನೆಯ ಮೂಲಕ ಜೀವನ ಪಾವನಗೊಳಿಸಿ ಪುರುಷಾರ್ಥ ಸಾಧನೆಯಿಂದ ಯಶಸ್ಸು ಸಾಧ್ಯ ಎಂದು ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಮಹಾಸ್ವಾಮಿ ಹೇಳಿದರು.

ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಆಶೀರ್ವಚನ ನೀಡಿ, ಯಾವ ಕುಲದಲ್ಲಿ ಜನಿಸಿದರೂ ಭಗವದನುಗ್ರಹಕ್ಕೆ ಭಕ್ತಿ ಮಾರ್ಗವೊಂದೇ ಸುಲಭ ವಿಧಾನ. ಸಮಾಜದಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ ಎಂದರು.

ಮೈಸೂರಿನ ಶ್ರೀಅರ್ಜುನ ಅವಧೂತ ಮಹಾರಾಜರು, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಧ್ಯಕ್ಷತೆ ವಹಿಸಿದ್ದರು. ಪೆರಿಯ ಗೋಕುಲಂ ಗೋಶಾಲೆಯ ಸಂಸ್ಥಾಪಕ ವಿಷ್ಣುಪ್ರಸಾದ ಹೆಬ್ಬಾರ್, ಮಲ್ಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೈವಜ್ಞ ನಾಗೇಂದ್ರ ಬಾರಧ್ವಾಜ್ ಸುರತ್ಕಲ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಆನಂದ, ವಾಸುದೇವ ಹೊಳ್ಳ ಎಲ್ಲಂಗಳ, ಅಲಂಕಾರ ಸಮಿತಿ ಸಂಚಾಲಕ ಯೋಗೀಶ್ ಎಂ.ಆರ್, ಗಣೇಶ್ ನಾಯ್ಕ ದುಬೈ, ಮಧೂರು ಕಾಳಿಕಾಂಬ ಮಠದ ಅಧ್ಯಕ್ಷ ಕೋಟೆಕ್ಕಾರ್ ಪ್ರಭಾಕರ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮುರಳೀಕುಮಾರ್, ಗಿರೀಶ್ ಉಪಸ್ಥಿತರಿದ್ದು ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ನಾರಾಯಣಯ್ಯ ಕೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜತೆಕಾರ್ಯದರ್ಶಿ ಧನಂಜಯ ಮಧೂರು ವಂದಿಸಿದರು. ಲೋಕೇಶ್ ಎಂ.ಬಿ.ಆಚಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net