ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

pdb (5)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಜಿಲ್ಲೆಯ ಪ್ರತಿಷ್ಠಿತ ಪಡುಬಿದ್ರಿ ಸೊಸೈಟಿ ರಾಜ್ಯಕ್ಕೇ ಮಾದರಿಯಾಗಿ ಅಂತಾರಾಷ್ಟ್ರೀಯ ಸಹಕಾರ ವರ್ಷದ ಆಚರಣೆ ಹಮ್ಮಿಕೊಂಡಿದೆ. ಸಹಕಾರ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ 1ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ, ರಾಜ್ಯ ಸಹಕಾರ ಮಹಾಮಂಡಲ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷ-2025 ಅಂಗವಾಗಿ ಸಹಕಾರ ಸಂಸ್ಥೆ ಮೂಲಕ ಉತ್ತಮ ಜಗತ್ತು ನಿರ್ಮಿಸಲು ಸಾಧ್ಯ ಧ್ಯೇಯವಾಕ್ಯದೊಂದಿಗೆ ಭಾನುವಾರ ಆರಂಭಗೊಂಡ ಸಹಕಾರ ಸಪ್ತ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿ ಸ್ವಯಂ ಸ್ವಚ್ಛತಾ ಕಾರ್ಯ ನಡೆಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್, ವ್ಯವಸ್ಥಾಪಕ ವಿಶ್ವನಾಥ್, ಅರುಣ್, ಪಡುಬಿದ್ರಿ ಸೊಸೈಟಿ ನಿರ್ದೇಶಕರಾದ ಗಿರೀಶ್ ಪಲಿಮಾರು, ಶಿವರಾಮ ಶೆಟ್ಟಿ, ಮಾಧವ ಆಚಾರ್ಯ, ಕೃಷ್ಣ ಬಂಗೇರ, ರೋಹಿಣಿ, ಕುಸುಮಾ ಕರ್ಕೇರ, ಕಾಂಚನಾ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್, ಹೆಜಮಾಡಿ ಶಾಖಾ ಪ್ರಬಂಧಕಿ ಕೀರ್ತಿ ಎಚ್.ವಿ., ಕಾರ್ಯಕ್ರಮ ಸಂಚಾಲಕ ನಿಖಿಲ್, ಕರಾವಳಿ ಯುವಕ ಮಂಡಲ ಅಧ್ಯಕ್ಷ ದಿವಾಕರ ಹೆಜಮಾಡಿ, ಗೌರವಾಧ್ಯಕ್ಷ ಗೋವರ್ಧನ ಕೋಟ್ಯಾನ್, ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್, ಪಡುಬಿದ್ರಿ ನಡಿಪಟ್ಣ ಸ್ಟಾರ್ಸ್‌ ಸಂಸ್ಥೆ ಪದಾಧಿಕಾರಿಗಳಾದ ದಿಶಾನ್, ಕಿರಣ್‌ರಾಜ್ ಕರ್ಕೇರ, ಸಂತೋಷ್ ಸಾಲ್ಯಾನ್, ಯುವವಾಹಿನಿ ಘಟಕ ಅಧ್ಯಕ್ಷ ವಿದಿತ್, ತೆಂಕ ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ಯತೀಶ್ ಸುವರ್ಣ ಉಪಸ್ಥಿತರಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.

ಸ್ವಚ್ಛತೆ ಕಡೆಗೊಂದು ನಮ್ಮ ಹೆಜ್ಜೆ

ಸ್ವಚ್ಛತೆಯ ಕಡೆಗೊಂದು ನಮ್ಮ ಹೆಜ್ಜೆ ಘೋಷಣೆಯೊಂದಿಗೆ ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದದ ವತಿಯಿಂದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ, ಪಡುಬಿದ್ರಿ ನಡಿಪಟ್ಣ ಕರಾವಳಿ ಸ್ಟಾರ್ಸ್‌, ಯುವವಾಹಿನಿ ಪಡುಬಿದ್ರಿ ಘಟಕಗಳ ವತಿಯಿಂದ ಪಡುಬಿದ್ರಿ ಬೀಚ್, ತೆಂಕ ಎರ್ಮಾಳು ಕರಾವಳಿ ಫ್ರೆಂಡ್ಸ್ ಸಹಯೋಗದೊಂದಿಗೆ ತೆಂಕ ಎರ್ಮಾಳು ಬೀಚ್ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net