

ಕೋಟ: ಉಡುಪಿ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡು ಅಧಿಕಾರಿ ಸ್ವೀಕರಿಸಿದ ಸ್ವರೂಪ ಟಿ.ಕೆ ಭಾನುವಾರ ಕೋಟದ ಅಮೃತೇಶ್ವರಿ ದೇಗುಲಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು.
ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಆನಂದ್.ಸಿ.ಕುಂದರ್ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿ ದೇಗುಲದ ವತಿಯಿಂದ ಶಾಲು ಹೊದಿಸಿ ಪ್ರಸಾದ ವಿತರಿಸಿ ಗೌರವಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಸುಧಾ ಪೂಜಾರಿ, ಜ್ಯೋತಿ ದೇವದಾಸ್, ವಾಜಿ ಟ್ರಸ್ಟಿ ಚಂದ್ರ ಪೂಜಾರಿ, ರಾಜು ಪೂಜಾರಿ, ಸುಬ್ರಾಯ ಜೋಗಿ, ಸ್ಥಳೀಯ ದೇವೇಂದ್ರ ಗಾಣಿಗ, ಭರತ್ ಗಾಣಿಗ, ಅರ್ಚಕರಾದ ವೀರಭದ್ರ,ರಾವೇಂದ್ರ ಜೋಗಿ, ವಿಜಯ ಜೋಗಿ, ದೇಗುಲ ವ್ಯವಸ್ಥಾಪಕ ಗಣೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.