ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಪರಿಸರ ದಿನಾಚರಣೆ; ಪ್ರಯಾಣಿಕರಿಗೆ ಸೆಣಬಿನ ಚೀಲ ವಿತರಣೆ

Railway
Published on

ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಪರಿಸರ ಸಂರಕ್ಷಣೆಯ ಕುರಿತ ಆಸಕ್ತಿ ಹೆಚ್ಚಿಸಲು ಉದ್ದೇಶಿಸಲಾಗಿದ್ದ ಸೆಲ್ಫಿ ಪಾಯಿಂಟ್​ನ್ನು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್​ ಮೋಹನ್​ ಉದ್ಘಾಟಿಸಿದರು. ಬಳಿಕ ಪರಿಸರ ರಕ್ಷಣೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ಲಾಸ್ಟಿಕ್​ ಬಳಕೆಯಿಂದಾಗುವ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರಯಾಣಿಕರಿಗೆ ವಿಭಾಗದ ವತಿಯಿಂದ ಸೆಣಬಿನ ಚೀಲಗಳನ್ನು ವಿತರಿಸಲಾಯಿತು. ಸ್ಕೌಟ್ಸ್​ ಮತ್ತು ಗೈಡ್ಸ್​ ಸ್ವಯಂಸೇವಕರು ಕೆಎಸ್​ಆರ್​ ನಿಲ್ದಾಣದಲ್ಲಿ ಮಾಲಿನ್ಯ, ತ್ಯಾಜ್ಯ ವಿಂಗಡನೆ ಮುಂತಾದ ಕ್ರಮಗಳ ಬಗ್ಗೆ ನಾಟಕ ಪ್ರದರ್ಶಿಸಿದರು. ಪರಿಸರ ದಿನದ ಹಿನ್ನೆಲೆ ಬೆಂಗಳೂರು ವಿಭಾಗ ವ್ಯಾಪ್ತಿಯ ನಿಲ್ದಾಣಗಳಲ್ಲಿ ಸುಮಾರು 8 ಸಾವಿರ ಗಿಡಗಳನ್ನು ನೆಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net