ಕೆಐಎನಲ್ಲಿ ಇ.ವಿ. ಟ್ಯಾಕ್ಸಿಗಳಿಗೆ ಚಾಲನೆ; ಮಹಿಳೆಯರಿಗೆ ಗುಲಾಬಿ ಬಣ್ಣದ ಕಾರುಗಳು ಮೀಸಲು

Taxi
Published on

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಿಫೆಕ್ಸ್​ ಇವೀಲ್ಜ್​ ಸಹಯೋಗದಲ್ಲಿ ಆರಂಭವಾಗಿರುವ ಎಲೆಕ್ಟ್ರಿಕ್​ ಏರ್​ಪೋರ್ಟ್​ ಟ್ಯಾಕ್ಸಿಗಳಿಗೆ ಬುಧವಾರ ಬಿಐಎಎಲ್​ನ ಸಿಇಒ ಹರಿ ಮರಾರ್​, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಚಾಲನೆ ನೀಡಿದರು.

ಬಿಐಎಎಲ್​ನ ಸಿಇಒ ಹರಿ ಮರಾರ್​ ಮಾತನಾಡಿ, ಮಾಲಿನ್ಯರಹಿತ ವಾತಾವರಣ ಸೃಷ್ಟಿಸುವ ಉದ್ದೇಶದೊಂದಿಗೆ ಪರಿಸರ ದಿನದಂದು ಇಂಧನಯುಕ್ತ 75 ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್​ಗೆ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದರು.

ರಿಫೆಕ್ಸ್​ ಗ್ರೂಪ್​ನ ವ್ಯವಸ್ಥಾಪಕ ನಿರ್ದೇಶಕ ಅನಿಲ್​ ಜೈನ್​ ಮಾತನಾಡಿ, ರಿಫೆಕ್ಸ್​ನ ಗ್ರೀನ್​, ರಿಫೆಕ್ಸ್​ ಇವೀಲ್​ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇ.ವಿ. ಟ್ಯಾಕ್ಸಿ ಸೇವೆ ಒದಗಿಸುವ ಅವಕಾಶ ದೊರೆತಿದೆ. ಈ ನೂತನ ಟ್ಯಾಕ್ಸಿಗಳನ್ನು ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣಗಳ ಎರಡೂ ರ್ಟಮಿನಲ್​ಗಳಲ್ಲಿ ಹಾಗೂ ಬಿಎಲ್​ಆರ್​ ಪಲ್ಸ್​ ಮೊಬೈಲ್​ ಅಪ್ಲಿಕೇಶನ್​ ಮೂಲಕ ಬುಕ್​ ಮಾಡಬಹುದು. ಗುಲಾಬಿ ಬಣ್ಣದ ಟ್ಯಾಕ್ಸಿಗಳು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು, ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸುತ್ತಾರೆ. ಜತೆಗೆ ಪ್ರಯಾಣಿಕ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net