ಎನರ್ಜಿ ಕನ್ಸರ್ವೇಶನ್ ಅವಾರ್ಡ್‌ಗೆ ಕರೆ

application
Published on

ಕಾಸರಗೋಡು: ರಾಜ್ಯದಲ್ಲಿ ಇಂಧನದ ಸಮರ್ಥ ಬಳಕೆ ಉತ್ತೇಜಿಸಲು ಕೇರಳ ಸರ್ಕಾರವು ಸ್ಥಾಪಿಸಿರುವ ಇಂಧನ ಸಂರಕ್ಷಣಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ದೊಡ್ಡ ಶಕ್ತಿ ಗ್ರಾಹಕರು, ಮಧ್ಯಮ ಶಕ್ತಿಯ ಗ್ರಾಹಕರು, ಸಣ್ಣ ಇಂಧನ ಗ್ರಾಹಕರು, ಕಟ್ಟಡಗಳು, ಸಂಸ್ಥೆಗಳು ಮತ್ತು ಸಂಘಟನೆಗಳು, ಇಂಧನ ಕಾರ್ಯಕ್ಷಮತೆ ಉತ್ಪನ್ನಗಳ ಪ್ರವರ್ತಕರು, ಆರ್ಕಿಟೆಕ್ಟಿಕಲ್ ಸಂಸ್ಥೆಗಳು ಮತ್ತು ಗ್ರೀನ್ ಬಿಲ್ಡಿಂಗ್ ಕನ್ಸಲ್ಟೆನ್ಸಿಗಳು ಎಂಬ ಏಳು ವಿಭಾಗಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಮೂರು ಆರ್ಥಿಕ ವರ್ಷಗಳ ಇಂಧನ ಸಂರಕ್ಷಣಾ ಚಟುವಟಿಕೆಗಳ ಮಾನದಂಡ ಆಧರಿಸಿ ಪ್ರಶಸ್ತಿ ಪ್ರದಾನಿಸಲಾಗುತ್ತದೆ.

ಪ್ರಶಸ್ತಿಗಾಗಿ ಆಯ್ಕೆಪಟ್ಟಿಗೆ ಸೇರ್ಪಡೆಯಾದವರಿಗೆ ಸರ್ಟಿಫೈಡ್ ಎನರ್ಜಿ ಆಡಿಟರ್/ಮ್ಯಾನೇಜರ್ ಪರೀಕ್ಷೆಗೆ ಹಾಜರಾಗಲು ಈ ದಾಖಲೆ ಸಹಾಯಕವಾಗಲಿದೆ.

ಅರ್ಜಿ ನಮೂನೆಯನ್ನು ವೆಬ್‌ಸೈಟ್ www.keralaenergy.gov.inನಿಂದ ಡೌನ್‌ಲೋಡ್ ಮಾಡಬೇಕಿದ್ದು, ಭರ್ತಿಗೊಳಿಸಿದ ಬಳಿಕ ecawardsemc@gmail.com ಇ ಮೇಲ್‌ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿ ಪಡೆಯಲು ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0471 2594922 ಅಥವಾ 2594924)ಸಂಪರ್ಕಿಸಬಹುದು. ಅರ್ಜಿಯನ್ನು ಅಕ್ಟೋಬರ್ 10ರ ಒಳಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net