

ಕಾರ್ಕಳ: ವಿದ್ಯೆ ಕಲಿಸುವ ಗುರುವಿನ ಪಾತ್ರ ಪ್ರತಿಯೊಬ್ಬರ ಜೀವನದಲ್ಲಿದೆ. ಅಂತಹ ವೃತ್ತಿಯನ್ನು ವಾಡುವ ಗುರುಗಳ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು, ಗುರುವಿಗೆ ಸವಾಜದಲ್ಲಿ ಗೌರವವನ್ನು ಸಲ್ಲಿಸುವ ಕಾರ್ಯ ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದು ಉಡುಪಿ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ದೇವದಾಸ ಪ್ರಭು ಹೇಳಿದರು.
ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನಿವೃತ್ತ ಅಧ್ಯಾಪಕ ಕೆ.ವಿವೇಕಾನಂದ ಹೆಗ್ಡೆಯವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಸಂಚಾಲಕ ಡಾ.ಪಿ.ಬಾಲಕೃಷ್ಣ ಆಳ್ವ ಆಧ್ಯಕ್ಷತೆ ವಹಿಸಿದ್ದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋರಿಬೆಟ್ಟು ಗುತ್ತು ಸುರೇಂದ್ರ ಎಸ್.ಶೆಟ್ಟಿ ಉದ್ಘಾಟಿಸಿದ್ದರು.
ವಿವೇಕಾನಂದ ಹೆಗ್ಡೆ ದಂಪತಿಯನ್ನು ಸನ್ಮಾನಿಸಲಾಯಿತು. ಕಾಲೇಜಿಗೆ ವಿವಿಧ ದಾನಿಗಳು ನೀಡಿದ ದತ್ತಿನಿಧಿಗಳನ್ನು ವಿತರಿಸಲಾಯಿತು. ಕೋಟೇಶ್ವರದ ಗೀತಾ ಎಚ್.ಎಸ್.ಫೌಂಡೇಶನ್ ಆಧ್ಯಕ್ಷ ಶಂಕರ ಐತಾಳ್ ಅವಾಸೆಬೈಲು, ಆಡಳಿತ ಮಂಡಳಿ ಕೋಶಾಧಿಕಾರಿ ಡಾ.ಪ್ರಭಾಕರ ಶೆಟ್ಟಿಗಾರ್, ಸದಸ್ಯರಾದ ಅಶೋಕ ಶೆಟ್ಟಿ, ಪ್ರಕಾಶ್ ಕೆ.ಎನ್., ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಶರತ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಸುದರ್ಶನ್ ವೈ.ಎಸ್., ರವಾ ರಂಗ ಟ್ರಸ್ಟ್ನ ರಕ್ಷಿತ್ ಆರ್., ನಿವೃತ್ತ ಕಂದಾಯ ಅಧಿಕಾರಿ ಅವಿಲ್ ಡಿಸೋಜ, ವಿದ್ಯಾರ್ಥಿ ನಾಯಕ ಪ್ರಣಿತ್, ಉಪ ನಾಯಕಿ ಮನಸ್ವಿ ಮತ್ತಿತರರಿದ್ದರು. ಪ್ರಕಾಶ್ ನಾಕ್, ವಾಲತಿ, ಶರತ್ ರಾವ್ ಪುರಸ್ಕೃತ ವಿದ್ಯಾರ್ಥಿಗಳ ವಿವರ ನೀಡಿದರು. ಪ್ರಾಂಶುಪಾಲ ಮಾಲತೇಶ ಇಂಗಳಕಿ ಸ್ವಾಗತಿಸಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸವಿತಾ ವಂದಿಸಿದರು. ಪ್ರಭಾಕರ ಶೆಟ್ಟಿ ನಿರೂಪಿಸಿದರು.