

ಕುಂದಾಪುರ: ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಸಮಯ ನೀಡಬೇಕು ಎಂದು ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಪಾವ್ಲ್ ರೆಗೋ ಹೇಳಿದರು.
ಕುಂದಾಪುರ ಹೋಲಿ ರೋಜರಿ ಆಂಗ್ಲ ವಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಶಿಕ್ಷಕ-ರಕ್ಷಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾಹೆ ಮಣಿಪಾಲ ನಸಿರ್ಂಗ್ ಕಾಲೇಜಿನ ಉಪನ್ಯಾಸಕಿ ಪ್ರತಿಭಾ ಲಿಡಿಯಾ ಬ್ರಾಗ್ಸ್ ವಾತನಾಡಿದರು. ಮುಖ್ಯ ಶಿಕ್ಷಕಿ ತೆರೆಜ್ ಶಾಂತಿ ಶಾಲೆಯ ನೀತಿ ನಿಯಮಗಳ ಬಗ್ಗೆ ಪಾಲಕರಿಗೆ ತಿಳಿಸಿದರು. ಕನ್ನಡ ಅಧ್ಯಾಪಕ ಲೂವಿಸ್ ಪ್ರಶಾಂತ್ ರೆಬೆರೋ ಶಾಲಾ ವರದಿ ವಾಚಿಸಿದರು.
ಸಹ ಶಿಕ್ಷಕಿ ರಮ್ಯಾ ಸ್ವಾಗತಿಸಿ, ಲೂವಿಸ್ ಪ್ರಶಾಂತ್ ರೆಬೆರೋ ವಂದಿಸಿದರು. ಓರನ್ ಡಿಸೋಜ ನಿರೂಪಿಸಿದರು.