ಶಿಕ್ಷಕ ವೃತ್ತಿ ಮುಗ್ಧತೆಯ ಪ್ರತಿರೂಪ

beelkoduge
ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ಕನ್ನಡ ಅಧ್ಯಾಪಕ ಬಾಷಾ ಹಸನ್ ಸಾಹೇಬ್ ಅವರ ಬೀಳ್ಕೊಡುಗೆ ಸವಾರಂಭ ನಡೆಯಿತು.
Published on

ಕುಂದಾಪುರ: ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗೆ ವಾತೃ ಸ್ವರೂಪದ್ದಾಗಿದ್ದು, ಮುಗ್ಧತೆಯ ಪ್ರತಿರೂಪ. ಮಕ್ಕಳಿಗೆ ಅರಿವು ತುಂಬುವುದು ಬಹು ಪುಣ್ಯ ಕಾಯಕ. ಈ ಪುಣ್ಯ ಕಾಯಕದಲ್ಲಿ ನನಗೆ ತೃಪ್ತಿ ಸಿಕ್ಕಿದೆ. ನಾನು ಸಲ್ಲಿಸಿದ ಸೇವೆಗಿಂತ ಹೆಚ್ಚು ನನಗೆ ವಿದ್ಯಾರ್ಥಿಗಳ, ವೃತ್ತಿ ಬಾಂಧವರ ಪ್ರೀತಿ ಸಿಕ್ಕಿದೆ ಎಂದು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ಕನ್ನಡ ಅಧ್ಯಾಪಕ ಬಾಷಾ ಹಸನ್ ಸಾಹೇಬ್ ಹೇಳಿದರು.

ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಬಾಷಾ ಹಸನ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಶುಭ ಹಾರೈಸಿದರು. ಉಪನ್ಯಾಸಕ ಹರೀಶ್ ನಾಯಕ್, ಅಧ್ಯಾಪಕರಾದ ಶ್ರೀಕಾಂತ, ಉದಯ ಮಡಿವಾಳ ಎಂ., ರವಾನಂದ ನಾಯಕ್ ಹಾಗೂ ವಿದ್ಯಾರ್ಥಿಗಳು ನಿವೃತ್ತಿ ಹೊಂದಿದ ಬಾಷಾ ಹಸನ್ ಸಾಹೇಬ್ ಅವರ ವ್ಯಕ್ತಿತ್ವ, ವೃತ್ತಿ ಬದ್ಧತೆ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಸದಸ್ಯರಾದ ಕುವಾರಸ್ವಾಮಿ, ಜೋಗಿ ವಿಶ್ವನಾಥ್ ಮತ್ತು ಸಿದ್ದಿಕ್, ಶಿಕ್ಷಕರು, ಉಪನ್ಯಾಸಕರು ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅನುರಾಧ ಸ್ವಾಗತಿಸಿ, ನಾಗರತ್ನ ಎಂ. ವಂದಿಸಿದರು. ಪೂರ್ಣಿಮಾ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net