

ಹೆಬ್ರಿ: ಎಸ್.ಆರ್.ಪಬ್ಲಿಕ್ ಸ್ಕೂಲ್, ಎಸ್.ಆರ್. ಆಂಗ್ಲ ವಾಧ್ಯಮ ಪ್ರೌಢಶಾಲೆಯಲ್ಲಿ 2025 -26ನೇ ಶೈಕ್ಷಣಿಕ ವಷರ್ದ ವಿದ್ಯಾರ್ಥಿ ಸಂದ ಉದ್ಘಾಟನೆ, ಪ್ರವಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ನಾಯಕನಾಗಿ ನಿತೀನ್ ಗೌಡ ಆರ್., ನಾಯಕಿಯಾಗಿ ಸಿಂಚನಾ ಎಸ್.ಶೆಟ್ಟಿ, ಸಹ ನಾಯಕನಾಗಿ ದೀಪಕ್ ಬಿ.ಎಸ್., ಆರೋಗ್ಯ ಮಂತ್ರಿಯಾಗಿ ಎಸ್.ಜಿ.ತೇಜಸ್, ಶಿಸ್ತಿನ ಮಂತ್ರಿಯಾಗಿ ಯಶವಂತ್ ಎಲ್.ನಾಯ್ಕ, ಪಂಚಮಿ ಆರ್.ಶೆಟ್ಟಿ, ಸಾಂಸ್ಕೃತಿಕ ಮಂತ್ರಿಯಾಗಿ ಸುಮಂತ್ ವಿ.ಎಚ್., ಸಮೃದ್ಧಿ ಶೆಟ್ಟಿ, ಕ್ರೀಡಾ ಮಂತ್ರಿಯಾಗಿ ವರ್ಷಾ ಎಂ.ಪೂಜಾರಿ, ಐಶ್ವರ್ಯ ಎಸ್.ನಾಯ್ಕ ಆಯ್ಕೆಯಾಗಿದ್ದಾರೆ.
ಎಸ್.ಆರ್.ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲೆ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್., ಪ್ರೌಢಶಾಲೆ ಮುಖ್ಯಶಿಕ್ಷಕ ಗೋಪಾಲ್ ಆಚಾರ್ಯ, ಕೋ-ಆರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕ ಪುಂಡಲೀಕ, ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು. ನಿರೀಕ್ಷಾ ಸ್ವಾಗತಿಸಿದರು. ಋತ್ವಿ ಶೆಟ್ಟಿ ವಂದಿಸಿದರು.