

ಗಂಗೊಳ್ಳಿ: ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಮೂಲಕ ದೀನ ದಲಿತರಿಗೆ ಅದರಲ್ಲೂ ಶಿಕ್ಷಣಕ್ಕೆ ಒತ್ತು ನೀಡಿ ಕಾರ್ಯಕ್ರಮ ರೂಪಿಸಿದ್ದರು. ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಅನೇಕ ಕಾರ್ಯಕ್ರಮ ನೀಡಿ ವಿಶ್ವವೇ ಧರ್ಮಸ್ಥಳವನ್ನು ನೋಡುವಂತೆ ಮಾಡಿದ್ದರು ಎಂದು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಹೇಳಿದರು.
ಗಂಗೊಳ್ಳಿ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ, ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪುಣ್ಯಸ್ಮರಣೆ -ನುಡಿ ನಮನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗಂಗೊಳ್ಳಿ ಬಿ ಒಕ್ಕೂಟ ಮಾಜಿ ಅಧ್ಯಕ್ಷೆ ಸುಮಿತ್ರಾ ಜಿ. ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫರ್ನಾಂಡಿಸ್, ರೇಖಾ ಖಾರ್ವಿ, ನಿಖಿತಾ, ಕಮಲಾ, ಶೇಷಮ್ಮ, ಶೋಭಾ, ಸಹನಾ, ಸಂಗೀತಾ, ಮಹಿಳಾ ಸಂಘದ ಸರೋಜ ಜಿ.ಟಿ., ಕುಸುಮಾ, ಶಕುಂತಳಾ, ಸುಶೀಲಾ, ಶಿವಾನಂದ ಜಿ.ಟಿ., ಜಿ.ಈಶ್ವರ, ಶ್ರೀಕಾಂತ ಎನ್. ಮತ್ತಿತರರು ಉಪಸ್ಥಿತರಿದ್ದರು. ರೇಖಾ ಖಾರ್ವಿ ಸ್ವಾಗತಿಸಿ, ಸುಮಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ನಿಖಿತಾ ವಂದಿಸಿದರು.