ಅಣ್ಣನ ಉತ್ತರಕ್ರಿಯೆ ಸಿದ್ಧತೆಯಲ್ಲಿದ್ದ ಮಹಿಳೆ ವಿದ್ಯುತ್ ಪ್ರವಹಿಸಿ ಸಾವು

lalitha
ಲಲಿತಾ
Published on

ಕಾರ್ಕಳ: ನಿಟ್ಟೆ ಪರಪ್ಪಾಡಿಯಲ್ಲಿ ಅಣ್ಣನ ಉತ್ತರಕ್ರಿಯೆ ಸಿದ್ಧತೆಯಲ್ಲಿದ್ದ ಸಂದರ್ಭ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಲಲಿತಾ (59) ಮೃತಪಟ್ಟವರು. ನಿಟ್ಟೆ ಗ್ರಾಮದ ರಾಘು ಬೋಂಟ್ರ ಎಂಬುವರು ಇತ್ತೀಚೆಗೆ ನಿಧನರಾಗಿದ್ದು, ಅವರ ಉತ್ತರಕ್ರಿಯೆ ಶುಕ್ರವಾರಕ್ಕೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭ ಲಲಿತಾ ಕಾರ್ಯಕ್ರಮದ ಸ್ಥಳದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಂಬ ಸ್ಪರ್ಶಿಸಿದ್ದಾರೆ. ಆ ಸಂದರ್ಭ ಕಂಬದಲ್ಲಿ ವಿದ್ಯುತ್ ಪ್ರವಹಿಸಿದ್ದು, ಆಘಾತದಿಂದ ಮೃತಪಟ್ಟಿದ್ದಾರೆ. ಇವರು ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಓರ್ವ ಪುತ್ರನನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net