

ಕುಂದಾಪುರ: ಲಯನ್ಸ್ ಕ್ಲಬ್ ವೆಯಿಟ್ ಜೋನ್ ಕುಂದಾಪುರ ಆಶ್ರಯದಲ್ಲಿ ಕುಂದಾಪುರದ ಚೈತನ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಪುಸ್ತಕ ವಿತರಣೆ, ವಿಶೇಷ ಸಹ ಭೋಜನ ಹಾಗೂ ಮಕ್ಕಳ ಮನರಂಜನೆ ಕಾರ್ಯಕ್ರಮ ಗುರುವಾರ ನಡೆಯಿತು.
ಲಯನ್ಸ್ ಕ್ಲಬ್ ವೆಯಿಟ್ ಜೋನ್ ಅಧ್ಯಕ್ಷ ವಿಜಯ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಲಯನ್ 317-ಅ ಇದರ 2ನೇ ಚುನಾಯಿತ ಜಿಲ್ಲಾ ಅಧ್ಯಕ್ಷ ರಾಜೀವ ಕೋಟ್ಯಾನ್, ವೆಯಿಟ್ ಜೋನ್ ಉಪಾಧ್ಯಕ್ಷ ರಾಘವೇಂದ್ರ ವಿಠಲವಾಡಿ, ಸುಭಾಷ್ ಕೋಡಿ, ಸದಸ್ಯರಾದ ಹರೀಶ್ ಕುಂದರ್, ಗಣೇಶ್ ಕೆ.ಟಿ., ಹರೀಶ್ ಮೂಡು ಗೋಪಾಡಿ, ಶಾಲಾ ಅಧ್ಯಾಪಕಿ ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು. ಖಜಾಂಚಿ ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಧೀರ್ ನಾಯ್ಕ ವಂದಿಸಿದರು.