

ಮೂಲ್ಕಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಮಹತ್ತರಟ್ಟವಾಗಿದ್ದು, ಮುಂದಿನ ಸಾಧನೆಯ ಗುರಿ ನಿರ್ಧರಿಸಿ ಏಕಾಗ್ರತೆಯ ಮನಸ್ಸಿನಿಂದ ಸುಲಭ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದು ಜೆ.ಸಿ.ಐ. ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.
ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂಲ್ಕಿ ರೋಟರಿ ಕ್ಲಬ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ವಾತನಾಡಿದರು.
ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೀತಮ್ ಕುವಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಪ್ರೌಢಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ, ರೋಟರಿ ಕ್ಲಬ್‌ನ ಕಾರ್ಯದರ್ಶಿ ಜೇಮ್ಸ್ ಪೀಟರ್ ಡಿಸೋಜ, ಪದಾಧಿಕಾರಿಗಳಾದ ಅಶೋಕ್ ಕುವಾರ್ ಶೆಟ್ಟಿ, ಶಿವರಾಂ ಜಿ.ಅಮೀನ್, ಭಾನುಮತಿ ಶೆಟ್ಟಿ, ಶಾಲಾ ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ದಿಶಾಂತ್ ಮತ್ತಿತರರಿದ್ದರು.
ಜಿನರಾಜ್ ಸಾಲ್ಯಾನ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ 11 ಶಾಲೆಗಳ ಇಂಟರಾಕ್ಟ್ ಶಿಕ್ಷಕರನ್ನು ಗೌರವಿಸಲಾಯಿತು. ಪರೀಕ್ಷಾ ಪೂರ್ವ ತರಬೇತಿ ಶಿಬಿರ ನಡೆಯಿತು.