ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

kon
ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ, 38ನೇ ಕಳ್ತೂರು ಗ್ರಾಪಂ ಅಧ್ಯಕ್ಷ ನವೀನ್ ಪೂಜಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಹೆರಿಯಣ್ಣ ಶೆಟ್ಟಿ, ಸವಿತಾ ಪಿ., ಮೆಸ್ಕಾಂ ಹೆಗ್ಗುಂಜೆ ಶಾಖೆ ಶಾಖಾಧಿಕಾರಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು
Published on

ಕೊಕ್ಕರ್ಣೆ: ಇಂಧನ ಇಲಾಖೆ ವಿದ್ಯುತ್ ಪರಿವೀಕ್ಷಣಾಲಯ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಾಗೂ ಪದವಿಪೂರ್ವ ಕಾಲೇಜು ಕೊಕ್ಕರ್ಣೆ ಸಂಯುಕ್ತ ಆಶ್ರಯದಲ್ಲಿ ವಿದ್ಯುತ್ ಸುರಕ್ಷತಾ ಸಪ್ತಾಹ 2024 ಕಾರ್ಯಕ್ರಮ ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಜರುಗಿತು. ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ, 38ನೇ ಕಳ್ತೂರು ಗ್ರಾಪಂ ಅಧ್ಯಕ್ಷ ನವೀನ್ ಪೂಜಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಹೆರಿಯಣ್ಣ ಶೆಟ್ಟಿ, ಸವಿತಾ ಪಿ., ಮೆಸ್ಕಾಂ ಹೆಗ್ಗುಂಜೆ ಶಾಖೆ ಶಾಖಾಧಿಕಾರಿ ಮಲ್ಲಿಕಾರ್ಜುನ, ಪೇತ್ರಿ ಮೆಸ್ಕಾಂ ಶಾಖೆ ಜಗದೀಶ್, ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ, ಉಪಪಪ್ರಾಂಶುಪಾಲ ಈಶ್ವರ ಅಂಬಿಗ, ತಾಪಂ ನಿಕಟಪೂರ್ವ ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ, ಪಂಚಾಯಿತಿ ಸದಸ್ಯರುಗಳಾದ ಪ್ರಜ್ವಲ್, ನರಸಿಂಹ ಪೂಜಾರಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಕೃಷ್ಣ ಶೆಟ್ಟಿ ನಿರೂಪಿಸಿ, ನೌಕರರ ಸಂಘ ಮೆಸ್ಕಾಂ ಬ್ರಹ್ಮಾವರ ಸಂತೋಷ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net