

ವಿಜಯವಾಣಿ ಸುದ್ದಿಜಾಲ ಕಾರ್ಕಳ
ನಿರಂತರ ಸೇವಾ ಚಟುವಟಿಕೆಗಳ ಮೂಲಕ ಜನರನ್ನು ತಲುಪುವುದರೊಂದಿಗೆ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಹೊಸ ಘೋಷವಾಕ್ಯ ಮ್ಯಾಜಿಕ್ ಆಫ್ ರೋಟರಿಯನ್ನು ಸಾಕಾರಗೊಳಿಸುವತ್ತ ಕಾರ್ಯನಿರ್ವಹಿಸಬೇಕು ಎಂದು ರೋಟರಿ ಜಿಲ್ಲೆ 3182ರ 2026-27ನೇ ಸಾಲಿನ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಹೇಳಿದರು.
ಕಾರ್ಕಳದ ರೋಟರಿ ಕ್ಲಬ್ ರಾಕ್ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ನಿಕಟಪೂರ್ವ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ವಲಯ ಸೇನಾನಿ ಡಾ.ಸುದೀಪ ನೂತನ ವಲಯ ಸೇನಾನಿ ಸುರೇಶ್ ನಾಯಕ್ ಹಾಗೂ ಡಾ.ಭರತೇಶ್ ಅನುಭವ ಹಂಚಿಕೊಂಡರು. ನೂತನ ಸದಸ್ಯರಾಗಿ ಕ್ಲಬ್‌ಗೆ ಸೇರ್ಪಡೆಯಾದ ಆನಂದ ಸಿಂಗ್, ವಿನೋದ್ ಕುಮಾರ್ ಆರ್., ಸೋಜನ್ ಪಿ.ಜೇಮ್ಸ್ ಹಾಗೂ ರಾಘವೇಂದ್ರ ಕಾಮತ್ ಅವರನ್ನು ಬಿ.ಎಂ.ಭಟ್ ಸ್ವಾಗತಿಸಿದರು.
ನೂತನ ಅಧ್ಯಕ್ಷ ಉಪೇಂದ್ರ ವಾಗ್ಲೆ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಬಳಿಕ ಮಾಧವಿ ಕೆ. ಸಂಪಾದಕತ್ವದ ಕ್ಲಬ್ ಬುಲೆಟಿನ್ ಲೋಕಹಿತಂನ್ನು ನೂತನ ಸಹಾಯಕ ಗವರ್ನರ್ ಅನಿಲ್ ಡೇಸಾ ಅನಾವರಣಗೊಳಿಸಿದರು. ಧಾರಿಣಿ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಸುರೇಶ್ ನಾಯಕ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪ್ರಶಾಂತ್ ಜೈನ್ ವಂದಿಸಿದರು. ಉಪೇಂದ್ರ ವಾಗ್ಲೆ ವರದಿ ವಾಚಿಸಿದರು. ಮಾಧವಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಬಿ.ಕಾಂ.ರಾಂಕ್ ವಿಜೇತ ವಿದ್ಯಾರ್ಥಿನಿ ಶ್ರೀನಿಧಿ ನಾಯಕ್, ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ವಂಶಿ, ಸೃಷ್ಟಿ ರಮೇಶ್ ಶೆಟ್ಟಿ, ಭೂ ನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ, ಪಾಕ ತಜ್ಞ ವಸಂತ ಪ್ರಭು ಅಂಡಾರು ಹಾಗೂ ಶಿಕ್ಷಕ ಉಮೇಶ್, ಡಾ.ಭರತೇಶ್, ಡಾ.ಸುದೀಪ, ಶೈಲೇಂದ್ರ ರಾವ್ ಹಾಗೂ ಸುರೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಐಶ್ವರ್ಯ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗಣೇಶ್ ಆಚಾರ್ಯ ಹಿರ್ಗಾನ ಅವರ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ನೀಡಲಾಯಿತು. ಅನಿತಾ ಹಾಗೂ ಗಿರಿಜಾ ಎಂಬುವರಿಗೆ ಜಗದೀಶ್ ಹೆಗ್ಡೆ ಹಾಗೂ ರೋಟರಿ ಸಂಸ್ಥೆ ಕೊಡಮಾಡಿದ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.