

ಹೆಬ್ರಿ: ಚಾರ ಗ್ರಾಮದ ನಿತ್ಯಾನಂದ ರಾವ್(78) ಎಂಬುವರು ಶುಕ್ರವಾರ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಪಿಕಪ್ ವಾಹನಕ್ಕೆ ಬಿದಿರು ತುಂಬಿಸಿ ಮರಳಿ ಮನೆಗೆ ಬರಲು ರಸ್ತೆ ದಾಟುತ್ತಿದ್ದ ವೇಳೆ ಘಟನೆ ನಡೆದಿದೆ. ಬೈಕ್ ಸವಾರ ಅಭಿಲಾಷ್ ಗಾಯಗೊಂಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.