

ಬೆಳ್ತಂಗಡಿ: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರೀತಿ ಮುಖ್ಯ. ಸಂಸ್ಕಾರಯುತ ಜೀವನಕ್ಕಾಗಿ ಶಿಸ್ತು ಅವಶ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಮಾಜಿ ಅಧ್ಯಕ್ಷ ಸುಜಿತ್ ಭಿಡೆ ಹೇಳಿದರು.
ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಆಶ್ರಯದಲ್ಲಿ ಊರ ದಾನಿಗಳ ಸಹಕಾರದಲ್ಲಿ ವೈ.ಸಿ.ಭವನದಲ್ಲಿ ಶನಿವಾರ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿಧಿ ವಿತರಿಸಿ ಮಾತನಾಡಿದರು.
ಕ್ರೀಡಾ ಸಂಘ ಸಂಚಾಲಕ ನಾಮದೇವ ರಾವ್ ಶುಭಹಾರೈಸಿದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಅಧ್ಯಕ್ಷ ಶೀನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಜಯಪ್ರಕಾಶ್ ಶೆಟ್ಟಿ ಮುಂಬೈ, ಶಮಂತ ಕುಮಾರ್ ಜೈನ್, ಸ್ವಾತಿ ನವೀನ್, ಮುಂಡಾಜೆ ಸಿ.ಎ.ಬ್ಯಾಂಕ್ ನಿರ್ದೇಶಕಿ ಅಶ್ವಿನಿ ಎ.ಹೆಬ್ಬಾರ್, ಉಪನ್ಯಾಸಕ ಸಚಿನ್ ಹೆಬ್ಬಾರ್, ಶಿಕ್ಷಕಿ ಜತೀಕ್ಷಾ, ಕಾರ್ಯದರ್ಶಿ ಶಶಿಧರ ಠೋಸರ್ ಮತ್ತಿತರರಿದ್ದರು.