

ಕಾಸರಗೋಡು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ವತಿಯಿಂದ ಕಾಸರಗೋಡಿನಲ್ಲಿ ಭಜನಾ ಕಮ್ಮಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಕುರಿತು ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಿದ್ಧತಾ ಸಭೆ ಜರುಗಿತು.
ಭಜನಾ ಪರಿಷತ್ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಭಜನಾ ಕಮ್ಮಟದ ರೂಪುರೇಷೆ ತಯಾರಿಸಿ ಸದಸ್ಯರು ಮಾಡಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು, ಭಜನಾ ಪರಿಷತ್ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಮಾಹಿತಿ ನೀಡಿದರು. ಮಂಜೇಶ್ವರ ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಪೇಟೆ ವೆಂಕಟ್ರಮಣ ದೇವಸ್ಥಾನ ಸಮಿತಿ ಪ್ರಮುಖ ಕೆ.ಎನ್.ರಾಮಕೃಷ್ಣ ಹೊಳ್ಳ ಕಾಸರಗೋಡು, ಪೇಟೆ ವೆಂಕಟ್ರಮಣ ಮಹಿಳಾ ಭಜನಾ ಸಂಘದ ಪದಾಧಿಕಾರಿಗಳು, ವಿಶ್ವಕರ್ಮ ಭಜನಾ ಸಂಘ ಪದಾಧಿಕಾರಿಗಳು, ವಿವಿಧ ಭಜನಾ ಸಂಘದ ಸದಸ್ಯರು ಉಪಸ್ಥಿತರಿದ್ದರು. ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರೋಹಿತ್ ಮಧೂರು ಕಾರ್ಯಕ್ರಮ ನಿರೂಪಿಸಿದರು.