ಬೆಥನಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಪ್ರೆಸೆಂಟೇಶನ್ : ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳ ಕಾರ್ಯ

New Project (13)
Published on

ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಸಾಫ್ಟ್‌ವೇರ್ ಪ್ರಾಜೆಕ್ಟ್ ಪ್ರೆಸೆಂಟೇಶನ್ ಇತ್ತೀಚೆಗೆ ಬೆಥನಿ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನೀಲ್ ಜೋಸೆಫ್ ನೇತೃತ್ವದಲ್ಲಿ 20 ವಿದ್ಯಾರ್ಥಿಗಳು ನಾಲ್ಕು ವಿವಿಧ ಪ್ರಾಜೆಕ್ಟ್ ತಯಾರಿಸಿ ಪ್ರಸ್ತುತಪಡಿಸಿದರು. ಮರ್ದಾಳದ ಜೀವನ್ ಜ್ಯೋತಿ ಸ್ಪೆಷಲ್ ಸ್ಕೂಲ್ ನಿರ್ದೇಶಕ ಜಕರಿಯಾಸ್ ನಂದಿಯಾಟ್ ಹಾಗೂ ಬೆಥನಿ ಸಮೂಹ ಸಂಸ್ಥೆ ಸಂಚಾಲಕ ಜೈಸನ್ ಸೈಮನ್ ವಿದ್ಯಾರ್ಥಿಗಳ ಪರಿಶ್ರಮಕ್ಕೆ, ಸುನೀಲ್ ಮಾರ್ಗದರ್ಶನಕ್ಕೆ ಮೆಚ್ಚುಗೆ ಸೂಚಿಸಿದರು. ಡಾ.ವರ್ಗಿಸ್ ಕೈಪನಡ್ಕ, ಐಟಿಐ ವಿಭಾಗದ ಪ್ರಾಂಶುಪಾಲ ಸಜಿ ಕೆ.ಥಾಮಸ್ ಶುಭಹಾರೈಸಿದರು. ಜಾನ್ ಪಿ.ಎಸ್ ವಂದಿಸಿದರು. ಸುನೀಲ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net