ಈ ಜಿಲ್ಲೆಯಲ್ಲಿ ಇನ್ನೂ ಎರಡು ವಾರ ಶಾಲೆಗಳು ಮರು ಆರಂಭ ಆಗುವುದಿಲ್ಲ; ಸದ್ಯ ಪಿಯು ಮಾತ್ರ ಶುರು..

School
Published on

ಮಂಗಳೂರು: ರಾಜ್ಯದಲ್ಲಿ ಇಂದಿನಿಂದ 9ರಿಂದ 12ನೇ ತರಗತಿ ವರೆಗೆ ಶಾಲೆ-ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದ್ದರೂ ಇಲ್ಲೊಂದು ಜಿಲ್ಲೆಯಲ್ಲಿ ಇನ್ನೂ ಎರಡು ವಾರ ಶಾಲೆಯನ್ನು ತೆರೆಯದಿರಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಪಿಯು ತರಗತಿಗಳನ್ನಷ್ಟೇ ಮರು ಆರಂಭಿಸಲು ನಿರ್ಣಯಿಸಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿಲ್ಲ. ಪ್ರಸ್ತುತ ಶೇ. 3.45 ಪಾಸಿಟಿವಿಟಿ ರೇಟ್ ಇರುವುದರಿಂದ ಜಿಲ್ಲೆಯಲ್ಲಿ ಸದ್ಯ ಪಿಯು ಕಾಲೇಜುಗಳನ್ನು ಮಾತ್ರವೇ ಹಂತ ಹಂತವಾಗಿ ಮರು ಆರಂಭಿಸುವುದಕ್ಕೆ ಜಿಲ್ಲಾಡಳಿತ ನಿರ್ಧಾರಕ್ಕೆ ಬಂದಿದೆ. ಆದರೆ ಶಾಲೆಗಳನ್ನು ಮಾತ್ರ ಎರಡು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಶುರುಮಾಡಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಿಯು ಮಕ್ಕಳು ವೃತ್ತಿಪರ ಕೋರ್ಸ್‌, ಸಿಇಟಿ ಇತ್ಯಾದಿಗೆ ಸಿದ್ಧತೆ ನಡೆಸಬೇಕಿರುವುದರಿಂದ ಹಂತಹಂತವಾಗಿ ಪಿಯು ಕಾಲೇಜುಗಳನ್ನು ತೆರೆಯಬೇಕಾಗಿದೆ. ಬರುವ ಮಕ್ಕಳನ್ನು ಒಂದು ವಾರ ಕ್ವಾರಂಟೈನ್‌ ಮಾಡಿ, ಆರೋಗ್ಯ ತಪಾಸಣೆ ನಡೆಸಿ ತರಗತಿ ಶುರು ಮಾಡಬಹುದು. ಆ ಬಳಿಕ ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net