More

    ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

    ನವದೆಹಲಿ: ಎರಡು ಡೋಸ್ ಲಸಿಕೆ ಪಡೆದರೂ ಕರೊನಾ ಬರುವುದಿಲ್ಲ ಎಂಬುದು ಖಚಿತವಿಲ್ಲ. ಆದರೆ ಎರಡೂ ಡೋಸ್ ಪಡೆದ ಬಳಿಕವೂ ಕರೊನಾ ಬಂದರೆ ಅಂಥ ಅಪಾಯವಿಲ್ಲ ಎಂಬುದಾಗಿ ಸರ್ಕಾರ ಇದಾಗಲೇ ಸ್ಪಷ್ಟಪಡಿಸಿದ್ದು, ಎಲ್ಲರಿಗೂ ಗೊತ್ತಿರುವಂಥದ್ದೇ. ಈ ಮಧ್ಯೆ ಎರಡು ಡೋಸ್ ಲಸಿಕೆ ಪಡೆದ ಮೇಲೂ ಕರೊನಾ ಬಂದವರೆಷ್ಟು ಎಂಬ ಮಾಹಿತಿ ಈಗ ಹೊರಬಿದ್ದಿದೆ.

    ದೇಶದಲ್ಲಿ ಈ ವರೆಗೆ ಎರಡೂ ಡೋಸ್​ ಲಸಿಕೆ ಪಡೆದಿದ್ದರೂ 87 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಶೇ. 46ರಷ್ಟು ಪ್ರಕರಣ ಕೇರಳವೊಂದರಲ್ಲೇ ಕಂಡು ಬಂದಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯವೇ ತಿಳಿಸಿದೆ. ಕೇರಳದಲ್ಲಿ ಮೊದಲ ಡೋಸ್ ಪಡೆದ ಸುಮಾರು 80 ಸಾವಿರ ಮಂದಿಯಲ್ಲಿ ಹಾಗೂ ಎರಡೂ ಡೋಸ್ ಪಡೆದ ಸುಮಾರು 40 ಸಾವಿರ ಜನರಲ್ಲಿ ಕೋವಿಡ್-19 ದೃಢಪಟ್ಟಿದೆ.

    ಇದನ್ನೂ ಓದಿ: ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಇನ್ನು ನೂರಕ್ಕೆ ನೂರರಷ್ಟು ಲಸಿಕೀಕರಣ ಆಗಿರುವ ವಯನಾಡ್​ನಲ್ಲೂ ಕೋವಿಡ್​ ಸೋಂಕು ಕಾಣಿಸಿಕೊಂಡಿದೆ. ಕೇರಳದಲ್ಲಿ ಇಂದು 21,247 ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, 179 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡಿನ ಮೇಲೆ ಕೇಂದ್ರ ವಿಶೇಷ ನಿಗಾ ವಹಿಸಿದೆ. (ಏಜೆನ್ಸೀಸ್)

    ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!

    ಕಳೆದು ಹೋದ ಮೊಬೈಲ್​ಫೋನ್​ಗಾಗಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ; ಫೋನ್​ ಕಳ್ಕೊಂಡವನೊಬ್ಬ, ಪ್ರಾಣ ಕಳ್ಕೊಂಡಿದ್ದು ಮತ್ತೊಬ್ಬ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts