ಚಿಕನ್​ ಫ್ರೈ ಸರಿಯಾಗಿ ಮಾಡಿಲ್ಲವೆಂಬ ಸಿಟ್ಟಿನಿಂದ ಹೆಂಡತಿಯನ್ನು ಕೊಂದು ಮೂಟೆ ಕಟ್ಟಿ ಕೆರೆಗೆಸೆದ!

Untitled
ಚಿಕ್ಕಬಾಣಾವರದ ಕೆರೆ
Published on

ಬೆಂಗಳೂರು: ಚಿಕನ್ ಫ್ರೈ ಸರಿಯಾಗಿ ಮಾಡಿಲ್ಲ ಎಂದು ಸಿಟ್ಟಾದ ಗಂಡ, ಹೆಂಡತಿಯನ್ನು ಕೊಂದಿದ್ದಲ್ಲದೆ ಆಕೆಯ ಶವವನ್ನು ಮೂಟೆ ಕಟ್ಟಿ ಕೆರೆಗೆ ಎಸೆದ ಪ್ರಕರಣವೊಂದು ವರದಿಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪತಿ ಮುಬಾರಕ್ (32) ಈ ಕೃತ್ಯವೆಸಗಿದ್ದು, ಪತ್ನಿ ಶಿರಿನ್​ ಬಾನು (25) ಕೊಲೆಯಾದಾಕೆ. ಆರೋಪಿ ಪತಿ ಮೂರು ದಿನಗಳ ಹಿಂದೆ ವಕೀಲರ ಮೂಲಕ ಪೊಲೀಸ್​ ಠಾಣೆಯಲ್ಲಿ ಶರಣಾಗಿದ್ದು, ತಾನೇ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಹಾಸಿಗೆ ವ್ಯಾಪಾರ ಮಾಡಿಕೊಂಡಿರುವ ಆರೋಪಿ ಮುಬಾರಕ್​, ಎರಡು ವರ್ಷಗಳ ಹಿಂದೆ ದಾವಣಗೆರೆಯಿಂದ ಬೆಂಗಳೂರಿಗೆ ಬಂದು ತರಬನಹಳ್ಳಿಯಲ್ಲಿ ನೆಲೆಸಿ ಜೀವನ ಸಾಗಿಸುತ್ತಿದ್ದ.

ದೊಣ್ಣೆಯಿಂದ ಹೊಡೆದು ಹೆಂಡತಿಯನ್ನು ಹತ್ಯೆ ಮಾಡಿದ್ದಲ್ಲದೆ ಆಕೆಯ ಶವವನ್ನು ಚಿಕ್ಕಬಾಣಾವರ ಕೆರೆಗೆ ಕೊಂಡೊಯ್ದು ಎಸೆದಿದ್ದಾನೆ. ಪುತ್ರಿ 20 ದಿನಗಳಿಂದ ಕಾಣೆಯಾಗಿದ್ದಳು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಶವವನ್ನು ಬೈಕ್​ನಲ್ಲಿ ಸಾಗಿಸಿ ಕೆರೆಗೆ ಎಸೆಯಲಾಗಿದೆ ಎಂಬ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಶವದ ಹುಡುಕಾಟಕ್ಕೆ ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net