

ಕಾಸರಗೋಡು: ರೈಲು ನಿಲ್ದಾಣದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಒಂದೂವರೆ ಲಕ್ಷ ರೂ.ಬೆಲೆಬಾಳುವ ಆ್ಯಶಿಷ್ ಆಯಿಲ್ ಮತ್ತು ಗಾಂಜಾ ವಶಪಡಿಸಿಕೊಂಡು, ತಳಂಗರೆ ಬಾಂಗೋಡಿನ ಸೀನತ್ ನಗರದ ಬಿ.ಆಷ್ಕರ್ ಆಲಿಯನ್ನು ಬಂಧಿಸಲಾಗಿದೆ. ಅಬಕಾರಿ ಅಧಿಕಾರಿ ಜೋಸೆಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರೈಲು ಪ್ರಯಾಣಕ್ಕೆ ಸಜ್ಜಾಗಿದ್ದ ಆತನ ಬ್ಯಾಗಿನಿಂದ 212ಗ್ರಾಂ ಆ್ಯಶಿಷ್ ಓಯಿಲ್ ಮತ್ತು 122 ಗ್ರಾಂ ಗಾಂಜಾ ವಶಪಡಿಸಲಾಯಿತು. ಇನ್ನೊಂದು ಪ್ರಕರಣದಲ್ಲಿ ಮಾರಾಟಕ್ಕಾಗಿ ದಾಸ್ತಾನಿರಿಸಿದ್ದ 1.195ಕೆ.ಜೆ. ಗಾಂಜಾವನ್ನು ಕುಂಬಳೆ ಅಬಕಾರಿ ದಳ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದೆ. ಕುಬಣೂರು ಕನ್ನಾಟಿಪಾರೆ ನಿವಾಸಿ ಕೆ.ಅಬ್ದುಲ್ಲ(48)ಬಂಧಿತ. ಮನೆಯಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ರಹಸ್ಯ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ.