

ಪುತ್ತೂರು: ಮಾಣಿಲದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಜಾತಿ ನಿಂದನೆ ಮಾಡಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆದರೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಕೂಲಿಗೆ ಬರುವ ಹಲವು ಮಂದಿಯ ಮೇಲೂ ದೌರ್ಜನ್ಯ ನಡೆಸಿದ ಮಾತು ಕೇಳಿ ಬರುತ್ತಿದೆ. ಗುಡ್ಡೆಗೆ ಬರುತ್ತೀಯಾ ಎಂದಷ್ಟೇ ಕೇಳಿದ್ದಲ್ಲ ಪ್ರಕರಣವನ್ನು ಮುಗಿಸಿಕೊಳ್ಳಿ ಎಂದು ಮಹಿಳಾ ಉಪನಿರೀಕ್ಷಕರೊಬ್ಬರು ಹೇಳುವುದಾದರೆ ಇಲಾಖೆಯ ಅಽಕಾರಿಗಳ ಅಗತ್ಯವಿದೆಯಾ? ಎಂದು ದಲಿತ ಹಕ್ಕು ಸಮಿತಿ ರಾಜ್ಯ ಸದಸ್ಯೆ ಈಶ್ವರಿ ಶಂಕರ್ ಪದ್ಮುಂಜ ಪ್ರಶ್ನಿಸಿದರು.
ದೌರ್ಜನ್ಯದಿಂದ ಬಾಲಕಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆಯೂ ಊರಿನಲ್ಲಿ ಮಾತುಗಳು ಕೇಳುತ್ತಿದೆ. ಖಿನ್ನತೆಗೆ ಒಳಗಾದ ಬಾಲಕಿಗೆ ಕೌನ್ಸೆಲಿಂಗ್ ನೀಡಬೇಕು. ಮನೆಯವರು ವಿವಿಧ ರೀತಿಯ ಒತ್ತಡದಿಂದ ಅಂಜಿಕೊಂಡು ಸತ್ಯವನ್ನು ಮುಚ್ಚಿಡುವ ಸಾಧ್ಯತೆ ಇದೆ. ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಆರೋಪಿತ ಮಹೇಶ್ ಭಟ್ನನ್ನು ತಕ್ಷಣ ಬಂಽಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸಂತ್ರಸ್ತ ಬಾಲಕಿಯ ಮನೆಯವರಿಗೆ ಆಮಿಷಗಳನ್ನು ಒಡ್ಡಿದ್ದು, ಪಾಲಕರು ನಿರ್ಲಕ್ಷಿಸಿರುವುದರಿಂದ ಬೆದರಿಕೆ ಕರೆಗಳು ಬರುತ್ತಿವೆ. ಸಂಬಂಽಗಳ ಮೂಲಕ ಬೆದರಿಕೆ ಹಾಕಿದ ವಿಚಾರದಲ್ಲಿ ಹರೀಶ್ ಎಂಬಾತನ ಮೇಲೆ ಬಾಲಕಿಯ ತಂದೆ ಠಾಣೆಗೆ ದೂರು ನೀಡಿದ್ದು, ತನಿಖೆಯ ಬಳಿಕ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಆ ವ್ಯಕ್ತಿಯಿಂದ ಜೀವ ಹಾನಿಯಾಗುವ ಸಾಧ್ಯತೆಯಿದ್ದು, ಪೊಲೀಸರು ಮನೆಯವರಿಗೆ ಸೂಕ್ತ ರಕ್ಷಣೆ ನೀಡಬೇಕು. ಮಾ.೩೦ಕ್ಕೆ ಮುರುವದಲ್ಲಿ ಸಭೆ ನಡೆಸಿ ಏಪ್ರಿಲ್ ಮೊದಲವಾರ ವಿಟ್ಲದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ದಲಿತ ಹಕ್ಕು ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೊಣಾಜೆ, ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಮುರುವ ಕಾರ್ಯದರ್ಶಿ ಪುಷ್ಪರಾಜ್ ಉಪಸ್ಥಿತರಿದ್ದರು.