ಕರ್ಫ್ಯೂ ಸಮಯದಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನ; ಪೊಲೀಸರ ಕೈಗೆ ಸಿಕ್ಕಿಬಿದ್ದ ಪೆಡ್ಲರ್​​

ದರುಗಸ
Published on

ಬೆಂಗಳೂರು: ಕರೊನಾ ಕರ್ಫ್ಯೂ ಸಮಯದಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಆಂಧ್ರಪ್ರದೇಶದಿಂದ ಕಾರಿನಲ್ಲಿ ನಗರಕ್ಕೆ ಗಾಂಜಾ ತರುತ್ತಿದ್ದ ಅಂತಾರಾಜ್ಯ ಪೆಡ್ಲರ್​ನನ್ನು ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ಬಂಧಿಸಿದ್ದು, 104 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶ ಮೂಲದ ಕಲ್ಲಪಲ್ಲಿ ನಾಗೇಂದ್ರ (39) ಬಂಧಿತ. ಕೋವಿಡ್​ 19 ಲಾಕ್​ಡೌನ್​ ಬಗ್ಗೆ ಮಾಹಿತಿ ಇದ್ದ ನಾಗೇಂದ್ರ, ಚಿಂತಾಮಣಿ ಅರಣ್ಯ ಪ್ರದೇಶದಿಂದ ಗಾಂಜಾವನ್ನು ಖರೀದಿಸಿದ್ದ. ಕರ್ಫ್ಯೂ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಸಲುವಾಗಿ ಕಾರಿನಲ್ಲಿ ಮಾದಕ ದ್ರವ್ಯ ತುಂಬಿಕೊಂಡು ನಗರಕ್ಕೆ ಸಾಗಿಸುತ್ತಿದ್ದ. ನಗರದಲ್ಲಿ ಸಬ್​ ಪೆಡ್ಲರ್​ಗಳಿಗೆ ಪೂರೈಕೆ ಮಾಡಲು ಸಿದ್ದತೆ ನಡೆಸಿದ್ದ.

ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿ ಎಲೆಕ್ಟ್ರಾನಿಕ್​ ಸಿಟಿ ಡಿ ಮಾರ್ಟ್​ ಹಿಂಭಾಗದ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಿ ಕಾರು ಪರಿಶೀಲನೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪೆಡ್ಲರ್​ನಿಂದ 91.30 ಲಕ್ಷ ರೂ. ಮೌಲ್ಯದ 104 ಗಾಂಜಾ ಮತ್ತು ಕಾರು ಜಪ್ತಿ ಮಾಡಲಾಗಿದೆ. ಆರೋಪಿ ಜತೆಗೆ ಸಂಪರ್ಕದಲ್ಲಿದ್ದ ಸಬ್​ ಪೆಡ್ಲರ್​ಗಳ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net