More

    ಕರೊನಾದಿಂದ ಆಸ್ಪತ್ರೆ ಸೇರಿದರೂ ನಿಲ್ಲದ ಕನಸು; ಹಾಸ್ಪಿಟಲ್​ ಬೆಡ್ ಮೇಲೆ ಸಿಎ ತಯಾರಿ ನಡೆಸಿದ ಸೋಂಕಿತ

    ಭುವನೇಶ್ವರ: ಕರೊನಾ ಸೋಂಕಿನಿಂದಾಗಿ ಅನೇಕರು ಆಸ್ಪತ್ರೆ ಸೇರಿದ್ದಾರೆ. ಹಲವು ಜನರು ಭಯದಿಂದ ಬದುಕಲಾರಂಭಿಸಿದ್ದಾರೆ. ಆದರೆ ಈ ಒಬ್ಬ ವ್ಯಕ್ತಿ ಮಾತ್ರ ಕರೊನಾಗೆ ಹೆದರದೆ ಆಸ್ಪತ್ರೆಯಲ್ಲೂ ತನ್ನ ಕನಸಿನ ಬೆನ್ನಟ್ಟಿದ್ದಾನೆ. ಆಸ್ಪತ್ರೆಯ ಬೆಡ್​ ಮೇಲೆ ಕುಳಿತುಕೊಂಡು, ಸಿಎ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ವ್ಯಕ್ತಿಯ ಫೋಟೋ ಇದೀಗ ಸಕತ್​ ವೈರಲ್​ ಆಗಿದೆ.

    ಒಡಿಶಾದ ಗಂಜಾಮ್​ ಜಿಲ್ಲೆಯ ಜಿಲ್ಲಾಧಿಕಾರಿ, ಐಎಎಸ್​ ಅಧಿಕಾರಿ ವಿಜಯ್ ಕುಲಾಂಗೆ ಅವರು ಇತ್ತೀಚೆಗೆ ಕೋವಿಡ್​ ಕೇರ್​ ಸೆಂಟರ್​ ಒಂದಕ್ಕೆ ತೆರಳಿದ್ದರು. ಆ ವೇಳೆ ಅವರು ಒಬ್ಬ ವ್ಯಕ್ತಿ ಬೆಡ್​ ಮೇಲೆ ಕುಳಿತುಕೊಂಡು ಓದುತ್ತಿದ್ದದ್ದನ್ನು ಕಂಡಿದ್ದಾರೆ. ಆತನ ಬೆಡ್​ ಬಳಿ ಹೋಗಿ ಮಾತನಾಡಿಸಿಕೊಂಡು ಬಂದಿದ್ದಾರೆ. ಆತ ಸಿಎ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದುದ್ದಾಗಿ ಹೇಳಲಾಗಿದೆ.

    ಆ ಸೋಂಕಿತನ ಫೋಟೋವನ್ನು ವಿಜಯ್ ಕುಲಾಂಗೆ ಅವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. “ಯಶಸ್ಸು ಕಾಕತಾಳೀಯವಲ್ಲ. ಅದಕ್ಕೆ ಸಮರ್ಪಣೆ ಬೇಕು. ನಾನು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ಈ ವ್ಯಕ್ತಿ ಸಿಎ ಪರೀಕ್ಷೆಯ ಅಧ್ಯಯನ ಮಾಡುತ್ತಿರುವುದನ್ನು ನೋಡಿದೆ. ನಿಮ್ಮ ಸಮರ್ಪಣೆ ನಿಮ್ಮ ನೋವನ್ನು ಮರೆಯುವಂತೆ ಮಾಡುತ್ತದೆ. ಅದರ ನಂತರ ಯಶಸ್ಸು ಔಪಚಾರಿಕತೆ ಮಾತ್ರ.” ಎಂದು ಬರೆದುಕೊಂಡಿದ್ದಾರೆ.

    ಸೋಂಕಿನಿಂದ ಬಳಲುತ್ತಿರುವ ಸಮಯದಲ್ಲಿ ಭಯ ಪಡೆದೆಯೇ, ಮುಂದಿನ ಜೀವನಕ್ಕಾಗಿ ಕಷ್ಟಪಟ್ಟು ಅಧ್ಯಯನ ಮಾಡುತ್ತಿರುವ ಈ ಸೋಂಕಿತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಕರೊನಾ ಎಂದು ಆಸ್ಪತ್ರೆ ಸೇರಿದ ವೃದ್ಧನ ಸಂಶಯಾಸ್ಪದ ಸಾವು; ಶವದ ತಲೆಯಿಂದ ಒಸರಿದ ರಕ್ತ ನೋಡಿ ಕುಟುಂಬ ಕಂಗಾಲು

    ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts